‘ನೀವೆಲ್ಲಾ ಟೆರರಿಸ್ಟ್ಗಳು’: ಮುಸ್ಲಿಮ್ ವಿದ್ಯಾರ್ಥಿಗೆ ಕ್ಲಾಸ್ನಲ್ಲೇ ಅವಮಾನಿಸಿದ ಪ್ರೊಫೆಸರ್!
ಬೆಂಗಳೂರು, ಮಾರ್ಚ್ 28: ಪಿಐಎಸ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಪಾಠ ಮಾಡುವ ವೇಳೆ ಕೋಪಗೊಂಡ ಪ್ರೊಫೆಸರ್ ಡಾ. ಮೂರಳಿಧರ ದೇಶಪಾಂಡೆ ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಪಾಠದ ಮಧ್ಯದಲ್ಲಿ ಮಕ್ಕಳ ಗಲಾಟೆಯಿಂದಲೋ ಏನೋ ದೇಶಪಾಂಡೆ ಗರಂ ಆಗಿದ್ದು, ನೀವೆಲ್ಲಾ ಭಯೋತ್ಪಾದಕರು ಎಂದೆಲ್ಲಾ ನಿಂದಿಸಿದ್ದಾರೆ. ಇದೇ ವೇಳೆ ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ…