ಮುಸ್ಲಿಂ ನಾಯಕರಿಂದಲೇ ಆಪರೇಷನ್ ಪೈಲ್ವಾನ್ ಯಶಸ್ವಿ,ಪರಮಾತ್ಮ ಬಂದ್ರೂ ಹಿಂದೆ ಸರಿಯೊಲ್ಲ ಎಂದಿದ್ದ ಸಾದಿಕ್, ಈಗ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ!
<p><strong>ಬೆಂಗಳೂರು/ ದಾವಣಗೆರೆ (ಮಾ.28):</strong> ರಾಜ್ಯ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಪ್ರಮುಖ ನಾಯಕರು ಅಸಹಾಯಕರಾಗಿ ಕೈ ಎತ್ತಿದಾಗ ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅಹರ್ನಿಶಿ ಕಸರತ್ತು ನಡೆಸಿ ದಾವಣಗೆರೆ ಕಾಂಗ್ರೆಸ್‌ನ ‘ಆಪರೇಷನ್ ಬಂಡಾಯ ಶಮನ’ ಯಶಸ್ವಿಯಾಗಿ ಮುಗಿಸಿದ್ದಾರೆ.</p><p>ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದು ಹಠ ಹಿಡಿದು ನಾಮಪತ್ರವನ್ನೂ ಸಲ್ಲಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಿದ ಇಡೀ ಪ್ರಕ್ರಿಯೆ ಇದೀಗ ತೀವ್ರ ಕುತೂಹಲ ಮೂಡಿದೆ.</p><p>ಅಲ್ಪಸಂಖ್ಯಾತ ಮತಗಳು…