Headlines

ಮುಂದಿನ ಪ್ರೊಲೀಗ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲೂ ಪಾಕಿಸ್ತಾನದ ಬಳಿ ದುಡ್ಡಿಲ್ಲ!

ಮುಂದಿನ ಪ್ರೊಲೀಗ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲೂ ಪಾಕಿಸ್ತಾನದ ಬಳಿ ದುಡ್ಡಿಲ್ಲ!

ಕರಾಚಿ: 2025-26ರ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಹಿಂದೇಟು ಹಾಕುತ್ತಿದೆ. ಇದಕ್ಕೆ ಕಾರಣ ಪಾಕಿಸ್ತಾನದ ಬಳಿ ಹಣವಿಲ್ಲ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

2025-26ರ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವುದು ಅನುಮಾನವೆನಿಸಿದೆ. ಇದಕ್ಕೆ ಕಾರಣ ಆರ್ಥಿಕ ಬಿಕಟ್ಟು.

2019ರಿಂದ ಪ್ರೊ ಲೀಗ್ ನಡೆಯುತ್ತಿದ್ದರೂ ಪಾಕ್‌ ತಂಡ ಒಮ್ಮೆಯೂ ಟೂರ್ನಿಗೆ ಅರ್ಹತೆ ಪಡೆದಿಲ್ಲ.

ಆದರೆ ಮುಂದಿನ ಆವೃತ್ತಿಯಲ್ಲಿ ನ್ಯೂಜಿಲೆಂಡ್‌ ತಂಡ ಆಡದಿರಲು ನಿರ್ಧರಿಸಿದ ಕಾರಣ, ಟೂರ್ನಿಯಲ್ಲಿ ಕಣಕ್ಕಿಳಿಯುವಂತೆ ಪಾಕ್‌ ತಂಡಕ್ಕೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌(ಎಫ್‌ಐಎಚ್‌) ಆಹ್ವಾನ ನೀಡಿತ್ತು.

ಈ ಬಗ್ಗೆ ಆ.12ರ ಒಳಗೆ ತಿಳಿಸುವಂತೆಯೂ ಸೂಚಿಸಲಾಗಿತ್ತು. ಆದರೆ ವಿದೇಶದಲ್ಲಿ ಪಂದ್ಯಗಳು ನಡೆಯುವಾಗ ಅಲ್ಲಿಗೆ ತನ್ನ ತಂಡವನ್ನು ಕಳುಹಿಸಲು ಪಾಕ್‌ ಹಾಕಿ ಫೆಡರೇಷನ್‌(ಪಿಎಚ್‌ಎಫ್‌) ಬಳಿ ಈಗ ಹಣವಿಲ್ಲ.

ಹೀಗಾಗಿ 70 ಕೋಟಿ ರು. ಬಿಡುಗಡೆ ಮಾಡುವಂತೆ ಪಿಎಚ್‌ಎಫ್‌ ಪಾಕ್‌ ಕ್ರೀಡಾ ಮಂಡಳಿಗೆ ಮನವಿ ಮಾಡಿದೆ.

Source link

Leave a Reply

Your email address will not be published. Required fields are marked *