ವ್ಯಕ್ತಿತ್ವ ಪರೀಕ್ಷೆImage Credit source: Times Of India
ಸಾಮಾನ್ಯವಾಗಿ ವ್ಯಕ್ತಿಯ ನಡವಳಿಕೆಯ ಆಧಾರದ ಮೇಲೆ ಆತನ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಇದಲ್ಲದೆ ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷೆ ಮಾಡಬಹುದು. ಇವುಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (optical illusion) ಪರ್ಸನಾಲಿಟಿ ಟೆಸ್ಟ್ ಕೂಡಾ ಒಂದು. ಹೌದು ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲದೆ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ನಮಗೆ ತಿಳಿಸಿಕೊಡುತ್ತದೆ. ಅಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ ಮನುಷ್ಯನ ಮುಖ ಅಥವಾ ಕೈ ನಿಮಗೆ ಯಾವ ಅಂಶ ಕಾಣಿಸಿತು ಎಂಬುದ ಮೇಲೆ ನೀವು ಆಳವಾದ ಚಿಂತಕರೇ ಅಥವಾ ಸಮಸ್ಯೆಯನ್ನು ಪರಿಹರಿಸುವವರೇ ಎಂಬುದನ್ನು ಪರೀಕ್ಷಿಸಿ.
ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮನುಷ್ಯನ ಮುಖ ಹಾಗೂ ಕೈ ಇವರೆಡು ಅಂಶಗಳಿದ್ದು, ಇದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ಆಳವಾದ ಚಿಂತಕರೇ ಅಥವಾ ಸಮಸ್ಯೆಯನ್ನು ಪರಿಹರಿಸುವವರೇ ಎಂಬುದನ್ನು ಪರೀಕ್ಷಿಸಿ.
ನೀವು ಮೊದಲು ಮನುಷ್ಯನ್ನು ನೋಡಿದರೆ:
ಇದನ್ನೂ ಓದಿ
ಈ ಚಿತ್ರದಲ್ಲಿ ನೀವು ಮೊದಲು ಮನುಷ್ಯನ ಮುಖವನ್ನು ನೋಡಿದರೆ ನೀವು ಆಳವಾದ ಚಿಂತಕರು ಎಂದರ್ಥ. ನೀವು ಪ್ರತಿಯೊಂದು ವಿಷಯದ ಬಗ್ಗೆಯೂ ಆಳವಾಗಿ ಚಿಂತನೆಯನ್ನು ಮಾಡುತ್ತೀರಿ. ಅಲ್ಲದೆ ನಿಮಗೆ ನಿಮ್ಮ ಸಾಮರ್ಥ್ಯದ ಮೇಲೆ ಬಲವಾದ ಗ್ರಹಿಕೆ ಇದೆ. ಜೊತೆಗೆ ನಿಮ್ಮಲ್ಲಿ ದಯಾ ಗುಣವು ಇದೆ. ಒಟ್ಟಾರೆಯಾಗಿ ನೀವು ಯಾವುದೇ ವಿಷಯಗಳ ಬಗ್ಗೆ ಆಳವಾಗಿ ಯೋಚಿಸುವವರಾಗಿರುತ್ತೀರಿ. ಹಾಗೂ ಯೋಚಿಸಿಯೇ ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.
ಇದನ್ನೂ ಓದಿ: ನೀವು ಒಂಟಿಯಾಗಿರಲು ಇಷ್ಟಪಡುವವರೇ, ನಿಷ್ಠಾವಂತ ಸಂಗಾತಿಯೇ? ಈ ಚಿತ್ರ ನಿಮ್ಮ ಲವ್‌ಲೈಫ್ ಬಗ್ಗೆ ಹೇಳುತ್ತೆ
ಮೊದಲು ಕೈ ನೋಡಿದರೆ:
ಈ ಚಿತ್ರದಲ್ಲಿ ನಿಮಗೆ ಮೊದಲು ಕೈ ಕಾಣಿಸಿದರೆ, ನೀವು ನೈಸರ್ಗಿಕವಾಗಿ ಸಮಸ್ಯೆ ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವವರು ಎಂದರ್ಥ. ನಿಮಗೆ ಸವಾಲುಗಳನ್ನು ಹೇಗೆ ಎದುರಿಸಬೇಕು, ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು ಎಂಬ ಕಲೆ ಗೊತ್ತಿದೆ. ಹೀಗೆ ನೀವು ನಿಮ್ಮ ಜಾಣ್ಮೆಯಿಂದಲೇ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತೀರಿ. ಆದರೆ ಕೆಲವೊಮ್ಮೆ ನೀವು ಅತಿಯಾಗಿ ಯೋಚಿಸುವ ಸಾಧ್ಯತೆ ಇರುತ್ತದೆ ಮತ್ತು ಇದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಹೆಣಗಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ