![]()
ದ್ವಿದಳ ಧಾನ್ಯಗಳನ್ನು ಮೊಳಕೆ ಕಟ್ಟಿ ತಯಾರಿಸಿದ ಪೌಷ್ಟಿಕ ಮತ್ತು ರುಚಿಕರವಾದ ಹಾಲು ಕೇವಲ ಪಾನೀಯವಲ್ಲ, ಇದು ಆರೋಗ್ಯ, ಶಕ್ತಿ ಮತ್ತು ಪೋಷಣೆಗೆ ಅದ್ಭುತ ಗಿಫ್ಟ್ ಆಗಿದೆ. ಒಂದು ವೇಳೆ ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮತ್ತೊಂದು ವಿಚಾರವೆಂದರೆ ಈ ಪೌಷ್ಟಿಕ ಹಾಲು ರುಚಿಕರವಾಗಿ ಮಾತ್ರ ಇರಲ್ಲ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಉಬ್ಬುವುದು ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೊಟ್ಟೆ ತುಂಬಿದಂತೆ ಅನಿಸುವುದಿಲ್ಲ, ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ, ತೂಕವನ್ನು ನಿಯಂತ್ರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾದರೆ ಮನೆಯಲ್ಲಿ ಮೊಳಕೆಯೊಡೆದ ಕಾಳುಗಳಿಂದ ಹಾಲನ್ನು ಮಾಡುವುದು ಹೇಗೆಂದು ನೋಡೋಣ…