ಕಾಂತಾರಾ ಚಾಪ್ಟರ್ 1ರಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ ಎನ್ನೋದು ತಿಳಿದ ಮೇಲೆ ಸೋಶಿಯಲ್ ಮೀಡೀಯಾದಲ್ಲಿ ನಟಿಯ ಬಗ್ಗೆ ಸಿಕ್ಕಾಪಟ್ಟೆ ಪಾಸಿಟಿವ್ ಕಾಮೆಂಟ್ ಗಳು ಬರುತ್ತಿವೆ.

ಸಪ್ತಸಾಗರದಾಚೆ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ನಟಿ ರುಕ್ಮಿಣಿ ವಸಂತ್. ತಮ್ಮ ಮುದ್ದಾದ ನಟನೆಯ ಜೊತೆಗೆ ತಮ್ಮ ಅಂದದಿಂದ ಕನ್ನಡ ಸಿನಿರಸಿಕರನ್ನು ಗೆದ್ದಿದ್ದರು. ಇದೀಗ ಕಾಂತಾರ ಚಾಪ್ಟರ್ 1 ಮೂಲಕ ಸದ್ದು ಮಾಡುತ್ತಿದ್ದಾರೆ.

ರಿಷಭ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಕಾಂತಾರಾ ಚಾಪ್ಟರ್ 1 ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಕಲಾವತಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರನ್ನ ನೋಡಿ ಜನ ಭೂಲೋಕದ ಅಪ್ಸರೆ, ನಮ್ಮ ಪುಟ್ಟಿ ಸುಂದರಿ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಪುಟ್ಟಿ ಇದ್ರೆ ಸಿನಿಮಾ ಸೂಪರ್ ಹಿಟ್ ಎನ್ನುತ್ತಿದ್ದಾರೆ.

ಅಂದ ಹಾಗೆ ರುಕ್ಮಿಣಿ ವಸಂತ್ ಬಿರ್ ಬಲ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಸಪ್ತಸಾಗರದಾಚೆ ಎಲ್ಲೋ ಪಾರ್ಟ್ 1 ಮತ್ತು 2 ಸಿನಿಮಾದಲ್ಲಿ ನಟಿಸುವ ಮೂಲಕ ಜನಮನ ಗೆದ್ದರು. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿದ್ದು, ಸಿನಿಮಾ ಸೂಪರ್ ಹಿಟ್ ಆಗಿತ್ತು.

ಪುಟ್ಟಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ಎಷ್ಟೊಂದು ಜನಪ್ರಿಯತೆ ಗಳಿಸಿದರು ಅಂದ್ರೆ, ಬಳಿಕ ಸಾಲು ಸಾಲು ಸಿನಿಮಾ ಆಫರ್ ಗಳು ಹುಡುಕಿ ಬಂದಿದ್ದವು. ನಂತರ ನಟಿಸಿದ ಎಲ್ಲಾ ಸಿನಿಮಾಗಳು ಸಹ ಯಶಸ್ಸು ಗಳಿಸಿದ್ದವು. ಹಾಗಾಗಿ ರುಕ್ಮಿಣಿಯವರನ್ನು ಲಕ್ಕಿ ನಾಯಕಿ ಎನ್ನುತ್ತಿದ್ದಾರೆ.

ಸಪ್ತಸಾಗರದಾಚೆ ಬಳಿಕ ಬಘೀರ ಹಾಗೂ ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳು ಸಹ ಹಿಟ್ ಆಗಿದ್ದವು. ಹಾಗಾಗಿ ಇದೀಗ ಮತ್ತೆ ಹೊಸ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸಿರೋದರಿಂದ ಮತ್ತೆ ಸಿನಿಮಾ ಬಗ್ಗೆ ಭರವಸೆ ಹೆಚ್ಚಿದೆ.

ಆದರೆ ಚಂದನವನದ ದುರಂತ ನಾಯಕಿ ಎಂದೇ ಜನಪ್ರಿಯತೆ ಪಡೆದಿರುವ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲೂ ನಾಯಕನಿಗೆ ಸಿಗುತ್ತಾರೋ ಅನ್ನೋದನ್ನು ಕಾದು ನೋಡಬೇಕು.. ಇದೇ ಅಕ್ಟೋಬರ್ 25 ರಂದು ಕಾಂತಾರಾ ಚಾಪ್ಟರ್ 1 ಬಿಡುಗಡೆಯಾಗಲಿದೆ.

Source link
ರುಕ್ಮಿಣಿ ವಸಂತ್ ಇದ್ರೆ ಸಿನಿಮಾ ಬ್ಲಾಕ್ ಬಸ್ಟರ್ ! ಕಾಂತಾರ 1000 ಕೋಟಿ ಗ್ಯಾರಂಟಿ !