<p>ಸಮಂತಾ ಮತ್ತು ಕೀರ್ತಿ ಸುರೇಶ್ ಅದೆಂಥಾ ಸ್ನೇಹಿತೆಯರು ಅನ್ನೋದು ಗೊತ್ತೇ ಇದೆ. ಸದ್ಯ ಈ ಗೆಳತಿಯರು ರೆಸ್ಟೋರೆಂಟ್ ಒಂದ್ದರಲ್ಲಿ ಲಂಚ್ ಡೇಟ್ ಎಂಜಾಯ್ ಮಾಡಿದ್ದಾರೆ. ಇಬ್ಬರೂ ಜೊತೆಗೀರೋ ಫೋಟೋ ಶೇರ್ ಮಾಡಿದ್ದು ಇಬ್ಬರೂ ನಟಿಯರ ಫ್ಯಾನ್ಸ್ ಖುಷ್ ಆಗಿದ್ದಾರೆ. ಈ ಪ್ರೆಂಡ್ಲಿ ಸುಂದರಿಯರಿಗೆ ಕ್ಯೂಟಿಸ್ ಅಂತ ಕಾಮೆಂಟ್ಸ್ ಮಾಡ್ತಾ ಇರೋ ಫ್ಯಾನ್ಸ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿ ಅಂತ ಬೇಡಿಕೆ ಇಟ್ಟಿದ್ದಾರೆ.</p><p><strong>ಅಂದೊಂದಿತ್ತು ಕಾಲ ಚಿತ್ರದ 2ನೇ ಹಾಡು ರಿಲೀಸ್: </strong>ಈಗಾಗಲೇ ಸಿನಿಪ್ರಿಯರ ಮನಸ್ಸನ್ನ ಗೆದ್ದಿರುವಂತಹ ಅಂದೊಂದಿತ್ತು ಕಾಲ ಚಿತ್ರದ ಮುಂಗಾರು ಮಳೆಯಲ್ಲಿ … ಎಂಬ ಹಾಡು ಸೂಪರ್ ಹಿಟ್ ಆಗಿದ್ದು , ಯೂಟ್ಯೂಬ್ ನಲ್ಲಿ 36.4 ಮಿಲಿಯನ್ ವೀವ್ಸ್ ಆಗಿದೆ. ಈಗ ಚಿತ್ರದ ಎರಡನೇ ಸಾಂಗ್ ಅರೇರೇ ಯಾರೋ ಇವಳು … ಸಾಂಗ್ ರಿಲೀಸ್ ಆಗಿದ್ದು , 1990ರ ಕಾಲಘಟ್ಟದಲ್ಲಿ ನಡೆಯೋ ಸಿಕ್ವೆನ್ಸ್ ನಲ್ಲಿ ನಾಯಕ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ನಿಶಾ ಹರಿಕೃಷ್ಣನ್ 10ನೇ ತರಗತಿ ವಿದ್ಯಾರ್ಥಿಗಳಾಗಿ ಅಭಿನಯಿಸಿದ್ದಾರೆ. ವಿಶೇಷ ಅಂದ್ರೆ ಶಾಲಾ ವಿದ್ಯಾರ್ಥಿಗಳಿಂದಲೇ ಈ ಹಾಡನ್ನ ಬಿಡುಗಡೆ ಮಾಡಿಸಿದೆ ಚಿತ್ರತಂಡ.</p>
Source link
ರೆಸ್ಟೋರೆಂಟ್‌ನಲ್ಲಿ ಸಮಂತಾ- ಕೀರ್ತಿ ಸುರೇಶ್ ಲಂಚ್ ಡೇಟ್ ಎಂಜಾಯ್
