ಕೈ ಕೋಟೆಯ ಚಿದಂಬರ ರಹಸ್ಯ ಸ್ಫೋಟ..! ‘ಬೆಟರ್ ಟು ಇಗ್ನೋರ್’ ಎಂದ ಮುಖ್ಯಮಂತ್ರಿ..! ಸಿಂಹಾಸನ ಭದ್ರ.. ಯಾರ ಕನಸು ಛಿದ್ರ..? ಸಿದ್ದು ಮಿತ್ರ ದಾಳ..! ಪವರ್ ಸೆಂಟರ್ ಯುದ್ಧ.. ಪಟ್ಟಕಾಳಗ.. ಸೆಪ್ಟೆಂಬರ್ ಸೀಕ್ರೆಟ್..! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸೆಪ್ಟೆಂಬರ್ ಗುಮ್ಮ. ಕಾಂಗ್ರೆಸ್ ಕೋಟೆಯೊಳಗೆ ಎದ್ದು ಬಂದು ಕೈ ಕಲಿಗಳ ಎದೆಗೇ ಒದೆಯುತ್ತಿದ್ದಾನೆ ಆ ಸೆಪ್ಟೆಂಬರ್ ಗುಮ್ಮ.. ಕ್ಷಿಪ್ರಕ್ರಾಂತಿಯ ಸುಳಿವು, ಬದಲಾವಣೆಯ ಬಾಂಬ್, ಪವರ್ ಸೆಂಟರ್ ಫೈಟ್.. ಸಿದ್ದು ಸಿಪಾಯಿಗಳೇ ಬಿಚ್ಚಿಟ್ಟ ಸ್ಫೋಟಕ ರಹಸ್ಯ.. ಕಂಡು ಕೇಳರಿಯದ ಅಂತರ್ಯುದ್ಧಕ್ಕೆ ಸಾಕ್ಷಿಯಾಗಲಿದ್ಯಾ ಕೈ ಸಾಮ್ರಾಜ್ಯ..? ಅತ್ಯಾಪ್ತ ಹೊತ್ತಿಸಿದ ಕಿಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು..? ಭುಗಿಲೆದ್ದು ನಿಂತ ಕ್ಷಿಪ್ರಕ್ರಾಂತಿ ದಿಗಿಲಿನ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಏನ್ ಹೇಳ್ತಾರೆ..?
ಮುಖ್ಯಮಂತ್ರಿ ಸಿದ್ದಾಮಯ್ಯನವರ ಆಪ್ತರು ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮಾತಾಡ್ತಾ ಇದ್ದಾರೆ, ರಾಜಕೀಯ ಕ್ಷಿಪ್ರಕ್ರಾಂತಿಯ ಸುಳಿವು ಕೊಡ್ತಾ ಇದ್ದಾರೆ… ಸರ್ಕಾರದಲ್ಲಿ ಆಗಲಿರೋ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪವರ್ ಸೆಂಟರ್ ಬಗ್ಗೆ ಧ್ವನಿ ಎತ್ತಿದ್ದಾರೆ. ಏನಿದರ ಮರ್ಮ..? ಏನಿದರ ಹಿಂದಿನ ಅಸಲಿ ಸತ್ಯ..? ಕೈ ಕೋಟೆಯಲ್ಲಿ ಬೀಸಲಿರೋ ಬಿರುಗಾಳಿಯ ಸುಳಿವು ಸಿಕ್ಕೇ ಬಿಡ್ತಾ..? ಇಷ್ಟು ದಿನ ಕ್ಷಿಪ್ರಕ್ರಾಂತಿಯ ಬಗ್ಗೆ ಮಾತಾಡ್ತಾ ಇದ್ದವರು ಡಿಕೆ ಶಿವಕುಮಾರ್ ಅವರ ಬೆಂಬಲಿಗರು.. ಅದೇನಚ್ಚರಿಯೋ ಗೊತ್ತಿಲ್ಲ.. ಈಗ ಮುಖ್ಯಮಂತ್ರಿ ಸಿದ್ದಾಮಯ್ಯನವರ ಆಪ್ತರೇ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮಾತಾಡ್ತಾ ಇದ್ದಾರೆ, ರಾಜಕೀಯ ಕ್ಷಿಪ್ರಕ್ರಾಂತಿಯ ಸುಳಿವು ಕೊಡ್ತಾ ಇದ್ದಾರೆ.
ಸರ್ಕಾರದಲ್ಲಿ ಆಗಲಿರೋ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪವರ್ ಸೆಂಟರ್ ಬಗ್ಗೆ ಧ್ವನಿ ಎತ್ತಿದ್ದಾರೆ. ಏನಿದರ ಮರ್ಮ..? ಏನಿದರ ಹಿಂದಿನ ಅಸಲಿ ಸತ್ಯ..? ಕೈ ಕೋಟೆಯಲ್ಲಿ ಬೀಸಲಿರೋ ಬಿರುಗಾಳಿಯ ಸುಳಿವು ಸಿಕ್ಕೇ ಬಿಡ್ತಾ..? ಅಷ್ಟಕ್ಕೂ ಸಾತನೂರಿನ ಸಲಗದ ಬೆನ್ನಿಗಿರೋ ಆ ಆನೆಬಲ ಯಾವುದು..? ಮುಖ್ಯಮಂತ್ರಿ ಆಗೇ ಆಗ್ತೀನಿ ಅನ್ನೋ ಡಿಕೆ ಸಾಹೇಬನ ಅಚಲ ವಿಶ್ವಾಸದ ಧೈರ್ಯ ಯಾವುದು..? ಸೆಪ್ಟೆಂಬರ್ ಗುಮ್ಮ ಯಾರಿಗೆ ವರ, ಯಾರಿಗೆ ಶಾಪ..? ಕಾಂಗ್ರೆಸ್ ಕೋಟೆಯೊಳಗೆ ಸೆಪ್ಟೆಂಬರ್ ಗುಮ್ಮ ಎದ್ದು ನಿಂತಿದೆ, ಸದ್ದು ಮಾಡ್ತಾ ಇದೆ. ಆ ಸೆಪ್ಟೆಂಬರ್ ಗುಮ್ಮ ಯಾರಿಗೆ ವರ, ಯಾರಿಗೆ ಶಾಪ..? ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಸಿದ್ದರಾಮಯ್ಯ ಬಣದವರೇ ಮಾತಾಡ್ತಾ ಇರೋದ್ರ ಗುಟ್ಟೇನು..?
ಡಿಕೆ ಬಣದವರ ಮೌನ ರಹಸ್ಯವೇನು..? ಹೆಜ್ಜೆ ಹಿಂದಿಟ್ಟು ಬೇಟೆಗೆ ರೆಡಿಯಾಗ್ತಾ ಇದ್ದಾರಾ ಕನಕಪುರ ಬಂಡೆ..? ಡಿಕೆ ಶಿವಕುಮಾರ್ ಅವ್ರು ಕಾಂಗ್ರೆಸ್ ಹೈಕಮಾಂಡ್’ಗೆ ಕೊಟ್ಟಿರೋ ಅಕ್ಟೋಬರ್ ಡೆಡ್’ಲೈನ್’ಗೂ ಈಗ ಸ್ಫೋಟವಾಗಿರೋ ಸೆಪ್ಟೆಂಬರ್ ಕ್ರಾಂತಿ ರಹಸ್ಯಕ್ಕೂ ಸಂಬಂಧ ಇದ್ಯಾ..? ಅದ್ರಲ್ಲಿ ಅನುಮಾನವೇ ಬೇಡ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು.. ಹಾಗಾದ್ರೆ ರಾಜ್ಯ ರಾಜಕಾರಣದಲ್ಲಿ ಅತೀ ದೊಡ್ಡ ಕ್ಷಿಪ್ರಕ್ರಾಂತಿ ನಡೆಯೋದು ಶತಸಿದ್ಧನಾ..? ಅದ್ರ ಸುಳಿವುಗಳು ಒಂದೊಂದಾಗಿ ಸಿಗ್ತಾ ಇವೆಯಾ..? ರಾಜ್ಯದಲ್ಲಿ ಮತ್ತೊಂದು ಮಹಾಕ್ರಾಂತಿಗೆ ಈ ಸೆಪ್ಟೆಂಬರ್ ಗುಮ್ಮ ಮುನ್ನುಡಿ ಬರೆಯಲಿದ್ಯಾ..?