
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಇಷ್ಟು ದೊಡ್ಡ ಮೊತ್ತವನ್ನು ನೀಡಿದರೂ, ಶಿವ್ ನಾಡಾರ್ ತಮ್ಮ ಹೆಸರು ಬರುವುದನ್ನು ಬಯಸುವುದಿಲ್ಲ, ಫೌಂಡೇಶನ್ ಹೆಸರು ಮಾತ್ರ ಇದ್ದರೆ ಸಾಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ತಿರುಚೆಂದೂರು ದೇವಸ್ಥಾನದ ಜೀರ್ಣೋದ್ಧಾರದ ಜೊತೆಗೆ, ದಕ್ಷಿಣ ಜಿಲ್ಲೆಗಳಲ್ಲಿರುವ ಹಲವು ದೇವಸ್ಥಾನಗಳಿಗೂ ಶಿವ್ ನಾಡಾರ್ ಅವರ ಫೌಂಡೇಶನ್ ಸದ್ದಿಲ್ಲದೆ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡುತ್ತಿದೆ. ಈ ಉದಾರ ದೇಣಿಗೆ ದೇವಸ್ಥಾನದ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಹಾಯಕವಾಗಲಿದೆ.