
ಶ್ರೀರಸ್ತು ಶುಭಮಸ್ತು ಇದೀಗ ಮುಗಿಯುವ ಹಂತಕ್ಕೆ ಬಂದಿದ್ದರೂ, ಸೀರಿಯಲ್ ಅನ್ನು ಎಳೆಯುತ್ತಾ ಇರುವುದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಸೀರಿಯಲ್ನಲ್ಲಿ ಒಂದೇ ಮನೆಯ ಸೊಸೆಯಂದಿರಾಗಿರುವವರು ಪೂರ್ಣಿ ಮತ್ತು ದೀಪಿಕಾ. ಅಣ್ಣ ತಮ್ಮಂದಿರ ಪತ್ನಿಯರಾದ ಇವರಿಬ್ಬರದ್ದೂ ಸೀರಿಯಲ್ನಲ್ಲಿ ಭಿನ್ನ ಕ್ಯಾರೆಕ್ಟರ್ ಆಗಿತ್ತು. ಒಬ್ಬಳು ಅತೀ ಒಳ್ಳೆಯವಳು, ಇನ್ನೊಬ್ಬಳು ಅಗತ್ಯಕ್ಕಿಂತ ಹೆಚ್ಚು ಕೆಟ್ಟವಳು ಅಂದ್ರೆ ವಿಲನ್. ದೊಡ್ಡ ಸೊಸೆ ಪೂರ್ಣಿಗೆ ಇನ್ನಿಲ್ಲದ ಕಾಟ ಕೊಡುವುದು ಎಂದರೆ ದೀಪಿಕಾಗೆ ಇನ್ನಿಲ್ಲದ ಖುಷಿ. ಅದರಲ್ಲಿಯೂ ಪೂರ್ಣಿ ಅನಾಥೆ ಎನ್ನುವ ಕಾರಣಕ್ಕೆ, ಅವಳನ್ನು ಹೆಜ್ಜೆ ಹೆಜ್ಜೆಗೂ ಹಂಗಿಸಿ, ಟೀಕಿಸುತ್ತಿದ್ದಳು. ಅದೇ ಪೂರ್ಣಿ ತುಂಬಾ ಒಳ್ಳೆಯವಳು. ಎಲ್ಲವನ್ನೂ ಸಹಿಸಿಕೊಂಡು ಹೋಗುವವಳು. ಆದರೆ ಇದೀಗ ದೀಪಿಕಾ ಕೂಡ ಒಳ್ಳೆಯವಳಾಗಿ ವರ್ಷವೇ ಕಳೆಯುತ್ತಾ ಬಂದಿದೆ.