Shrirasthu Shubhamasthu ಅಕ್ಕ- ತಂಗಿ ಮುಖಾಮುಖಿ! ರಾಧಾಳೇ ಮಾಧವ್ ಪತ್ನಿ? ತುಳಸಿ ಕಥೆ ಏನು?

Shrirasthu Shubhamasthu ಅಕ್ಕ- ತಂಗಿ ಮುಖಾಮುಖಿ! ರಾಧಾಳೇ ಮಾಧವ್ ಪತ್ನಿ? ತುಳಸಿ ಕಥೆ ಏನು?

Shrirasthu Shubhamasthu ಅಕ್ಕ- ತಂಗಿ ಮುಖಾಮುಖಿ! ರಾಧಾಳೇ ಮಾಧವ್ ಪತ್ನಿ? ತುಳಸಿ ಕಥೆ ಏನು?

ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಹೊಸತೊಂದು ಟ್ವಿಸ್ಟ್​ ಕೊಡಲಾಗಿದೆ. ರಾಧಾ ಮತ್ತು ಶಾರ್ವರಿ ಮುಖಾಮುಖಿಯಾಗಿದ್ದಾರೆ. ರಾಧಾ ಶಾರ್ವರಿಯನ್ನು ನೋಡಿ ಶಾಕ್​ಗೆ ಒಳಗಾಗಿದ್ದಾಳೆ. ಹಾಗಿದ್ದರೆ ರಾಧಾಳೇ ಮಾಧವನ ಪತ್ನಿ ಶರ್ಮಿಳನಾ? ಹಾಗಾದ್ರೆ ತುಳಸಿ ಕಥೆ?

ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿದೇ ಬಿಡ್ತು ಎನ್ನುವಷ್ಟರಲ್ಲಿಯೇ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಲೇ ಇದೆ. ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ… ಈ ಇಬ್ಬರು ಸೊಸೆಯಂದಿರ ನಡುವಿನ ಕಥೆ ಭಿನ್ನ ಭಿನ್ನ ಸ್ವರೂಪ ಪಡೆದುಕೊಳ್ಳುತ್ತಲೇ ಸಾಗಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ.

ಇದೀಗ ಪೊಲೀಸರ ಕೈಗೂ ಸಿಗದೇ ತಪ್ಪಿಸಿಕೊಂಡಿದ್ದಾಳೆ ಶಾರ್ವರಿ. ಇನ್ನೇನು ಸೀರಿಯಲ್​ ಮುಗಿದೇ ಹೋಯ್ತು ಎನ್ನುವಾಗಲೇ ರಾಧಾಳ ಪ್ರವೇಶವೂ ಆಗಿದೆ. ಸೀರಿಯಲ್​ ಇನ್ನೊಂದಿಷ್ಟು ದಿನ, ತಿಂಗಳು, ವರ್ಷ ಮುಂದಕ್ಕೆ ಹೋದರೂ ಅಚ್ಚರಿಯೇನಿಲ್ಲ ಎನ್ನುವಂತಿದೆ ಸ್ಥಿತಿ. ಇದೀಗ ಸೀರಿಯಲ್​ಗೆ ಮತ್ತಷ್ಟು ಟ್ವಿಸ್ಟ್​ ಕೊಡಲಾಗಿದೆ. ರಾಧಾ ಮತ್ತು ಆಕೆಯ ಸಹೋದರಿ ಶಾರ್ವರಿ ಮುಖಾಮುಖಿಯಾಗಿದ್ದು, ಶಾರ್ವರಿಯ ಗುರುತು ರಾಧಾಳಿಗೆ ಸಿಕ್ಕಿದೆ.

ಅಷ್ಟಕ್ಕೂ ತನ್ನ ಅಕ್ಕ ಶರ್ಮಿಳಾ ಸತ್ತು ಹೋಗಿದ್ದು, ಆಕೆಯ ಸಾವಿಗೆ ಮಾಧವನೇ ಕಾರಣ ಎನ್ನುವ ಕಾರಣಕ್ಕೆ ಶಾರ್ವರಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆ. ಅದೇ ಇನ್ನೊಂದೆಡೆ ಮಾಧವನೇ ತನ್ನ ಗಂಡ ಎನ್ನುವುದು ಈ ರಾಧಾ ಹಾಗೆಯೇ ನಡೆದುಕೊಳ್ಳುತ್ತಿದ್ದಾಳೆ ಕೂಡ. ಆದರೆ ಇದೀಗ ಅಕ್ಕ-ತಂಗಿ ಒಂದಾಗುವ ಕಾಲ ಬಂದಾಗಿದೆ.

ರಾಧಾ, ತುಳಸಿಯ ಮಗುವನ್ನು ಎತ್ತಿಕೊಂಡು ತಿರುಗಾಡುತ್ತಿದ್ದ ಸಂದರ್ಭದಲ್ಲಿ ಅದನ್ನು ಕಿಡ್​ನ್ಯಾಪ್​ ಮಾಡಿಕೊಂಡು ಶಾರ್ವರಿ ಕಡೆ ರೌಡಿಗಳು ಹೋಗಿದ್ದಾರೆ. ಆಗ ಅಲ್ಲಿಗೆ ಓಡಿ ಬರುವ ರಾಧಾ, ಶಾರ್ವರಿಯನ್ನು ನೋಡಿದ್ದಾಳೆ. ಶಾರ್ವರಿಯನ್ನು ನೋಡಿ ಅವಳಿಗೆ ಶಾಕ್​ ಆಗಿದೆ.

ಆದರೆ ರಾಧಾ ಶಾರ್ವರಿಯ ಅಕ್ಕನೇ ಆಗಿದ್ದರೆ, ಆಕೆ ಮಾಧವ್​ಗೆ ಯಾಕೆ ಗೊತ್ತಾಗಲಿಲ್ಲ ಎನ್ನುವ ಪ್ರಶ್ನೆಯೂ ಇದೆ. ಆಕೆಯ ಮುಖವನ್ನು ಪ್ಲಾಸ್ಟಿಕ್​ ಸರ್ಜರಿ ಮಾಡಲಾಗಿದೆಯೆ, ಇದರ ಹಿಂದಿನ ಕಥೆಯೇನು ಎನ್ನುವುದು ಕೂಡ ಇದೀಗ ಕುತೂಹಲವಾಗಿ ಉಳಿದಿದೆ. ಒಂದು ವೇಳೆ ರಾಧಾಳೇ ಶರ್ಮಿಳಾ ಆಗಿದ್ದರೆ, ಮಾಧವನ ಪತ್ನಿಯೆಂದಾಯಿತು. ಹಾಗಿದ್ದರೆ ತುಳಸಿಯ ಕಥೆ?

ಏಕೆಂದ್ರೆ, ಮಾಧವನ ಮೇಲೆ ರಾಧಾ ಸ್ವಲ್ಪ ಹೆಚ್ಚಾಗಿಯೇ ಕಾಳಜಿ ತೋರುತ್ತಿದ್ದಾಳೆ. ಒಂದು ಹಂತದಲ್ಲಿ ರಾಧಾಳನ್ನು ನೋಡಿ ಮಾಧವ್​, ತುಳಸಿ ಹಾಗೂ ಮನೆಯವರೆಲ್ಲರಿಗೂ ಖುಷಿಯಾಗಿತ್ತು. ಆದರೆ ಈಗ ಮಾಧವ್​ ಮೇಲೆ ರಾಧಾ ತೋರಿಸುತ್ತಿರುವ ಬೇರೆಯದ್ದೇ ರೀತಿಯ ಪ್ರೀತಿ ಮಾತ್ರ ತುಳಸಿಗೆ ಸಹಿಸಲು ಆಗುತ್ತಿಲ್ಲ. ಮಾಧವ್​ ಹೊರಗಡೆ ಹೋಗುವಾಗ ತುಳಸಿ ಆತನಿಗೆ ಕುಂಕುಮ ಇಟ್ಟು ಶುಭ ಕೋರಬೇಕಿತ್ತು. ಆದರೆ ಅಷ್ಟರಲ್ಲಿಯೇ ರಾಧಾ ಆ ಕೆಲಸವನ್ನು ಮಾಡಿದ್ದಾಳೆ. ತುಳಸಿಗೆ ಯಾಕೋ ಸಂದೇಹ ಬಂದಿದ್ದರೆ ಇದು ಮಾಧವ್​ಗೂ ಇಷ್ಟವಾಗಲಿಲ್ಲ.

ಇದಾಗಲೇ ಮಗುವನ್ನು ಕಿಡ್ನಾಪ್​ ಮಾಡಲು ಬಂದಿದ್ದ ಶಾರ್ವರಿ ಕೈಯಿಂದ ಮಗುವನ್ನು ಬಚಾವು ಮಾಡಿದ್ದಾಳೆ ರಾಧಾ. ಈ ಮೂಲಕ ಮನೆಮಂದಿಗೆಲ್ಲಾ ಅಚ್ಚುಮೆಚ್ಚು ಆಗಿದ್ದಾಳೆ. ತನ್ನ ಅಕ್ಕ ಸತ್ತಿದ್ದಾಳೆ ಎನ್ನುವ ಕಾರಣಕ್ಕೆ, ಅದೇ ದ್ವೇಷದಿಂದಲೇ ಶಾರ್ವರಿಮನೆಯವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾಳೆ.

ಆದರೆ ಅದೇ ಅಕ್ಕನೇ ತನ್ನನ್ನು ರೆಡ್​​ಹ್ಯಾಂಡ್​ ಆಗಿ ಹಿಡಿದಿರುವ ವಿಷಯ ಅವಳಿಗೆ ಗೊತ್ತಿಲ್ಲ. ಆ ಹೆಂಗಸು ಯಾರು ಎಂದು ಈಗ ತನಿಖೆ ಮಾಡುತ್ತಿದ್ದಾಳೆ. ಅವಳು ತನ್ನ ಅಕ್ಕನೇ, ಆಕೆ ಬದುಕಿದ್ದಾಳೆ ಎಂದು ತಿಳಿದರೆ ಅಲ್ಲಿಗೆ ಶಾರ್ವರಿಯ ಕೋಪ ತಣ್ಣಗಾಗುತ್ತಾ, ಅಥವಾ ತುಳಸಿಯನ್ನು ಸಾಯಿಸಿ ರಾಧಾ ಮತ್ತು ಮಾಧವ್​ ಮದ್ವೆಯಾಗುವ ಪ್ಲ್ಯಾನ್ ಮಾಡುತ್ತಲೇ ಮತ್ತೊಂದಿಷ್ಟು ವರ್ಷ ಸೀರಿಯಲ್​ ಮುಂದಕ್ಕೆ ಹೋಗುತ್ತಾ ನೋಡಬೇಕಿದೆ.

Source link

Leave a Reply

Your email address will not be published. Required fields are marked *