ಧರ್ಮಸ್ಥಳದ 8 ಸ್ಥಳ ಶೋಧ: ಸಿಕ್ಕಿದ್ದು 1 ಅಸ್ಥಿಪಂಜರ : ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ | Skeleton Discovered In Dharmasthala Fsl Team To Conduct Radio Carbon Dating

ಧರ್ಮಸ್ಥಳದ 8 ಸ್ಥಳ ಶೋಧ: ಸಿಕ್ಕಿದ್ದು 1 ಅಸ್ಥಿಪಂಜರ : ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ | Skeleton Discovered In Dharmasthala Fsl Team To Conduct Radio Carbon Dating


ಧರ್ಮಸ್ಥಳದಲ್ಲಿ ಇಂದು 5ನೇ ದಿನವೂ ಶೋಧ ಮುಂದುವರೆಯಲಿದೆ. ಇದುವರೆಗೆ 8 ಸ್ಥಳಗಳಲ್ಲಿ ಹೊಂಡ ಅಗೆಯಲಾಗಿದ್ದು, ಕೇವಲ 1 ಸ್ಥಳದಲ್ಲಿ ಮಾತ್ರ ಅಸ್ಥಿಪಂಜರ ಪತ್ತೆಯಾಗಿದೆ. ಸಿಕ್ಕ ಅಸ್ತಿಪಂಜರದ ವೈಜ್ಞಾನಿಕ ವಿಶ್ಲೇಷಣೆಯೇ ಈಗ ಸವಾಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಅಸ್ಥಿಪಂಜರ ರವಾನೆ ಮಾಡಲಾಗಿದ್ದು, ಅಲ್ಲಿನ ಫೋರೆನ್ಸಿಕ್ ವರದಿ ಮೇಲೆ ಎಸ್​ಐಟಿ ತನಿಖೆ ನಿಂತಿದೆ. ಮೊದಲಿಗೆ ಹೇಗೆ ಸಾವು ಸಂಭವಿಸಿತು ಎಂದು FSL ತನಿಖೆ ನಡೆಯಲಿದೆ.  ಇದು ಸಹಜ ಸಾವೋ? ಕೊಲೆಯೋ? ವ್ಯಕ್ತಿಯ ಎತ್ತರ.. ವ್ಯಕ್ತಿಯ ತೂಕ.. ವಯಸ್ಸು ಪತ್ತೆ ಮಾಡಲಿದ್ದಾರೆ.  ಇದಕ್ಕಾಗಿ ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ ಈ ಮೂಲಕ ಅಸ್ಥಿ ಪಂಜರದ ಅವಧಿ ಪತ್ತೆ ಹಚ್ಚೋ ಸಾಧ್ಯತೆ ಇದೆ ಹಗೂ  ವ್ಯಕ್ತಿಯ ಗುರುತು ಪತ್ತೆಗೆ FSLನಿಂದ ಮೂಳೆಯ ಡಿಎನ್​ಎ ಪರೀಕ್ಷೆ ನಡೆಯಲಿದ್ದು, 15 ದಿನಗಳಲ್ಲಿ FSLನಿಂದ ಮಧ್ಯಂತರ ವರದಿ ನೀಡುವ ಸಾಧ್ಯತೆ ಇದೆ.
ಅಂತಿಮ ವರದಿಗೆ 45-60 ದಿನಗಳು ತೆಗೆದುಕೊಳ್ಳೋ ಸಾಧ್ಯತೆ ಇದ್ದು, FSL ವರದಿ ಆಧರಿಸಿ ಎಸ್​ಐಟಿ ತನಿಖೆ ಮುಂದುವರೆಸಲಿದೆ.



Source link

Leave a Reply

Your email address will not be published. Required fields are marked *