ಗ್ರಾಮೀಣ ಭಾಗಕ್ಕೆ ಶ್ರೀಗಳ ಆರೋಗ್ಯ ಸೇವೆ ಶ್ಲಾಘನೀಯ ; ಮುರಳೀಧರ ಹಾಲಪ್ಪ
ಮಧುಗಿರಿ 3 : ಗ್ರಾಮೀಣ ಭಾಗದ ಬಡಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ಜಪಾನಂದ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿದರ ಹಾಲಪ್ಪ ಅಭಿಪ್ರಾಯ ಪಟ್ಟರು. ಪಟ್ಟಣದ ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀ ಸಿದ್ದಗಂಗಾ ಡಯಾಲಿಸಿಸ್ ಕೇಂದ್ರ ಮತ್ತು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಶಾಖೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಾವಗಡ ದಂತಹ ಗಡಿಭಾಗದಲ್ಲಿ ಸಾವಿರಾರು ಕುಷ್ಟರೋಗಿಗಳ ಆರೈಕೆ ಮಾಡುವ ಮೂಲಕ ಮಾನವ ಸೇವೆಯೇ…