Su From So Movie: ವಾರಾಂತ್ಯದಲ್ಲಿ ಬಿಡುಗಡೆಯಾಗಲಿದೆ ಕರಾವಳಿ ಕಾಮಿಡಿ ಥ್ರಿಲ್ಲರ್

Su From So Movie: ವಾರಾಂತ್ಯದಲ್ಲಿ ಬಿಡುಗಡೆಯಾಗಲಿದೆ ಕರಾವಳಿ ಕಾಮಿಡಿ ಥ್ರಿಲ್ಲರ್

ಸು ಫ್ರಂ ಸೋ.. ತನ್ನ ವಿಭಿನ್ನ ಟೈಟಲ್​ನಿಂದಾನೆ ಎಲ್ಲರ ಗಮನ ಸೆಳೆದಿರೋ ಈ ಸಿನಿಮಾ ವಾರಾಂತ್ಯಕ್ಕೆ ತೆರೆಗೆ ಬರಲಿದೆ. ಕರಾವಳಿ ಫ್ಲೆವರ್​ನ ಈ ಕಾಮಿಡಿ ಥ್ರಿಲ್ಲರ್ ಮೂವಿ ಕನ್ನಡದ ಜೊತೆಗೆ ಮಲಯಾಳಂನಲ್ಲೂ ಏಕಕಾಲದಲ್ಲಿ ರಿಲೀಸ್ ಆಗ್ತಾ ಇದೆ.

ಸು ಫ್ರಂ ಸೋ.. ಈ ಟೈಟಲ್​ ಕೇಳಿನೇ ಏನಿದು ವಿಭಿನ್ನವಾಗಿದೆಯಲ್ಲಾ ಅಂತ ಜನ ಕುತೂಹಲದಿಂದ ನೋಡಿದ್ರು. ಸು ಫ್ರಂ ಅಂದ್ರೆ ಸುಲೋಚನ ಫ್ರಂ ಸೋಮೇಶ್ವರ ಅನ್ನೋ ಗುಟ್ಟು ಬಿಟ್ಟುಕೊಟ್ಟಿದ್ದ ತಂಡ, ಇದೊಂದು ಕರಾವಳಿ ಫ್ಲೆವರ್​ ನ ಕಾಮಿಡಿ ಥ್ರಿಲ್ಲರ್ ಕಹಾನಿ ಅನ್ನೊದನ್ನ ಟ್ರೈಲರ್ ಮೂಲಕ ರಿವೀಲ್ ಮಾಡಿತ್ತು.

ರಾಜ್ ಬಿ ಶೆಟ್ಟಿ ಒಡೆತನದ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಮಾಡಿರೋ ಸಿನಿಮಾ ಇದು. ಜೆ.ಪಿ ತುಮ್ಮಿನಾಡು,  ಶನಿಲ್ಗುರು, ದೀಪಕ್ರೈ ಪಣಾಜೆ, ಪ್ರಕಾಶ್ ತುಮ್ಮಿನಾಡು , ಸಂಧ್ಯಾ ಅರೆಕೆರೆ  ತಾರಾಗಣದಲ್ಲಿ ಇದ್ದಾರೆ. ರಾಜ್ಬಿ. ಶೆಟ್ಟಿ  ಜತೆ  ಗರುಡ ಗಮನ ವೃಷಭ ವಾಹನ ಕಥಾ ಸಂಗಮ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಜೆ.ಪಿ ತುಮ್ಮಿನಾಡು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

ಸುಮೇದ್ ಸಂಗೀತ ನಿರ್ದೇಶನದಲ್ಲಿ ಬಂದ ಥ್ಯಾಂಕ್ಸ್ ಅಂಥೆಮ್ ಹಾಡು ಮತ್ತು ಚಿತ್ರದ ಚಿನಕುರಳಿ ಟ್ರೈಲರ್​ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ. ಮಲಯಾಳಂನ  ಖ್ಯಾತ ನಿರ್ಮಾಣ ಸಂಸ್ಥೆಯಾದ  ದುಲ್ಕರ್ ಸಲ್ಮಾನ್ ಒಡೆತನದ wayferar ಫಿಲಂಸ್ ಮಲಯಾಳಂ  ವರ್ಷನ್ ನ ಕೇರಳದಲ್ಲಿ ಬಿಡುಗಡೆ ಮಾಡಲಿದೆ.

ಈ ವಾರಾಂತ್ಯಕ್ಕೆ ಸು ಫ್ರಂ ಸೋ ಥಿಯೇಟರ್ ಅಂಗಳಕ್ಕೆ ಬರಲಿದೆ. ನಕ್ಕು ನಗಿಸೋದ್ರ ಜೊತೆಗೆ ಒಂದು ಥ್ರಿಲ್ಲಿಂಗ್ ಅನುಭವವನ್ನೂ ಕೊಡೋ ಉತ್ಸಾಹದಲ್ಲಿದೆ ಈ ಟೀಂ. ಸೋಮೇಶ್ವರದ ಸುಲೋಚನಳ ಕಥೆ ನೋಡಲಿಕ್ಕೆ ನೀವು ಕೂಡ ಸಜ್ಜಾಗಿ.

Source link

Leave a Reply

Your email address will not be published. Required fields are marked *