ಬೆಂಗಳೂರು (ಜೂ.26): ಮಧ್ಯಪ್ರಾಚ್ಯ ಅನ್ನೋದು ಈಗ ಬರೀ ಭೂಪ್ರದೇಶವಾಗಿ ಉಳಿದಿಲ್ಲ. ಅದೀಗ ಅಕ್ಷರಶಃ ಅಗ್ನಿ ಪರ್ವತ. ಯಾವಾಗ ಮರುಭೂಮಿಯ ಆ ಜ್ವಾಲಾಮುಖಿ, ಅತಿ ಭೀಕರವಾಗಿ ಸ್ಫೋಟಗೊಳ್ಳುತ್ತೋ, ಆಗ ಅದರ ಪರಿಣಾಮ ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳುತ್ತದೆ.
ಕೊನೆಗೆ ಅದರ ಕಂಟಕ ಭಾರತವನ್ನೂ ಕಾಡುತ್ತದೆ. ಅಷ್ಟಕ್ಕೂ, ಇಂಥಾ ಲೋಕಕಂಟಕ ಯುದ್ಧವನ್ನ ನಿಲ್ಲಿಸೋಕೆ, ಯಾರು ಏನು ಪ್ರಯತ್ನ ಪಡ್ತಾ ಇದಾರೆ? ಅದರ ಪರಿಣಾಮ ಏನಾಗಿದೆ? ಅಸಲಿಗೆ ಕದನ ವಿರಾಮ ಘೋಷಿಸಿದ ನಂತರವೂ ಸಂಘರ್ಷ ಸಾಗುತ್ತಿರೋದು ಯಾಕೆ?
ಇಂಥಾ ಹತ್ತಾರು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಇದೇ ಉತ್ತರ ಅಂತ ಹೇಳೋಕೆ ಸದ್ಯಕ್ಕಂತೂ ಯಾರಿಗೂ ಸಾಧ್ಯವಿಲ್ಲ. ಆದರೆ, ಒಂದು ವೇಳೆ ಕದನ ವಿರಾಮ ಸ್ಥಾಪನೆಯಾಗದೇ ಇದ್ದರೆ, ವಿನಾಶವಾಗೋದು ಏನೇನು ಗೊತ್ತಾ?