ಬೆಂಗಳೂರು (ಜು.3): ನಮ್ದೇ ಸರ್ಕಾರ. ನಾನೇ ಸಿಎಂ. ಹುಲಿಯಾ ಹುಕುಂ..! ಟಗರು ಬಿಟ್ಟಿರೋದು ಬಂಡೆ ಮೇಲೆ ಬ್ರಹ್ಮಾಸ್ತ್ರ! ಸೈಲೆಂಟ್ ಹಂಟರ್ ಡಿಕೆ ಬತ್ತಳಿಕೆ ಅಲ್ಲಿರೋದು ತಾಳ್ಮೆ ಅನ್ನೋ ಪ್ರತ್ಯಾಸ್ತ್ರ! ಕುರ್ಚಿ ಕಾದಾಟದ ಅಸಲಿ ಜಿದ್ದಾಜಿದ್ದಿ ಈಗ ಶುರುವಾಯ್ತಾ? ಸಿದ್ದು ವೀರ ದನಿ, ಡಿಕೆ ಶಾಂತ ಮೌನಿ, ಏನಿದು ಪಟ್ಟ ರಹಸ್ಯ ಕಹಾನಿ?
ಪಟ್ಟದ ಕಾದಾಟದಲ್ಲಿ ಸಿದ್ದು ಅಸಲಿ ಆಟ ಆರಂಭವಾಗಿದೆ. ಟಗರು ಪಟ್ಟಿಗೆ ಪ್ರತಿಯಾಗಿ ಡಿಕೆ ಇಟ್ಟಿರೋದು ಎರಡು ಹೆಜ್ಜೆ ಹಿಂದೆ. ಆದರೆ, ಕನಕಾಧಿತಿಯ ಪಟ್ಟದಾಸೆಯ ಕಿಚ್ಚಿನ್ನು ಆರಿಲ್ಲ.
ಅದು ಬೂದಿ ಮೂಚಿದ ಕೆಂಡ. ಸರಿಯಾದ ಸಮಯದಲ್ಲಿ ಧಗಧಗಿಸೋಕೆ ಕಾದಿದೆ..ಇನ್ನು, ಬಿಜೆಪಿ ತಮ್ಮ ಟಾರ್ಗೆಟ್ ಎನ್ನುತ್ತಲೇ ಡಿಕೆ ಕಡೆಗೆ ಬಾಣ ಬಿಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಹಾಗಂತ ಅದು ಇದೇ ಮೊದಲ ಬಾರಿಯೇನಲ್ಲ.