
ರುಚಿ, ಆರೋಗ್ಯದ ವಿಷಯ ಬಂದಾಗ ಹೆಚ್ಚಿನವರು ರುಚಿಗೆ ಪ್ರಾಮುಖ್ಯತೆ ಕೊಡ್ತಾರೆ. ಒಂದೇ ಒಂದು ಜೀವನ, ರುಚಿಯಾದ ಊಟ ಇಲ್ಲದಿದ್ದರೆ ಈ ಬದುಕೇಕೆ ಅಂತ ಅಂದುಕೊಳ್ಳುತ್ತಾರೆ. ಆದರೆ, ನಮ್ಮ ಅಡುಗೆ ವಿಧಾನದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಯಾವುದೇ ಅಡುಗೆಯನ್ನಾದರೂ ಆರೋಗ್ಯಕರವಾಗಿ ಮತ್ತು ರುಚಿಕರವಾಗಿಯೂ ಮಾಡಬಹುದು.
ನೀವು ನಿಮ್ಮ ಆಹಾರದಲ್ಲಿ ಎಣ್ಣೆಯ ಪ್ರಮಾಣ ಕಡಿಮೆ ಮಾಡಬೇಕೆಂದರೆ, ನಿಮ್ಮ ಅಡುಗೆ ವಿಧಾನವನ್ನೂ ಬದಲಾಯಿಸಿಕೊಳ್ಳಿ. ಉದಾಹರಣೆಗೆ, ಡೀಪ್ ಫ್ರೈ ಮಾಡುವ ಬದಲು ಏರ್ ಫ್ರೈ ಮಾಡಿ. ಅದರ ಜೊತೆಗೆ, ಬೇಕಿಂಗ್, ಗ್ರಿಲ್ಲಿಂಗ್ ಅಥವಾ ಸ್ಟೀಮಿಂಗ್ ಮಾಡಿ. ಇದರಿಂದ ಆಹಾರದಲ್ಲಿ ಎಣ್ಣೆ ಕಡಿಮೆ ಆಗುತ್ತದೆ. ರುಚಿಯಲ್ಲೂ ರಾಜಿ ಮಾಡಿಕೊಳ್ಳಬೇಕಾಗಿಲ್ಲ.