Headlines

ವಯಸ್ಸಾದಂತೆ ಮಹಿಳೆಯರ ತೂಕವೂ ಹೆಚ್ಚಾಗೋದು ಯಾಕೆ?

ವಯಸ್ಸಾದಂತೆ ಮಹಿಳೆಯರ ತೂಕವೂ ಹೆಚ್ಚಾಗೋದು ಯಾಕೆ?

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚುವುದು ಸಹಜವಾದರೂ ಆ ನಂತರ ಅಗತ್ಯಕ್ಕಿಂತ ಹೆಚ್ಚು ತೂಕ ಹೆಚ್ಚಾಗುತ್ತದೆ.

ಹೆಚ್ಚಿನ ಹೆಣ್ಣುಮಕ್ಕಳಿಗೆ ವಯಸ್ಸಾದಂತೆ ತೂಕವೂ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚುವುದು ಸಹಜವಾದರೂ ಆ  ನಂತರ ಅಗತ್ಯಕ್ಕಿಂತ ಹೆಚ್ಚು ತೂಕ ಕಂಡುಬರುತ್ತದೆ. ಮಗುವಿನ ಆರೈಕೆಯಲ್ಲಿ ನಿರತರಾಗಿರುವ ಕಾರಣ, ಪ್ರಸವದ ನಂತರ ತೂಕ ಇಳಿಸಿಕೊಳ್ಳುವುದು ಕಷ್ಟವಾಗುತ್ತದೆ.

ವಯಸ್ಸಾದಂತೆ ಹಾರ್ಮೋನ್‌ಗಳ ಬದಲಾವಣೆ, ಲೈಫ್‌ಸ್ಟೈಲ್‌ನ ಬದಲಾವಣೆ ಮತ್ತು ಒತ್ತಡಗಳು ತೂಕ ಹೆಚ್ಚುವಿಕೆಗೆ ಕಾರಣವಾಗುತ್ತವೆ. 40 ವರ್ಷ ದಾಟಿದ ಮೇಲೆ ಈ ಪರಿಣಾಮಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತವೆ. ತೂಕ ಇಳಿಸಿಕೊಳ್ಳುವುದು ಕಷ್ಟ ಅಂತ ಅನಿಸಬಹುದು.

1. ದೈಹಿಕ ಚಟುವಟಿಕೆ ಕಡಿಮೆಯಾಗುವುದು: ವಯಸ್ಸಾದಂತೆ ದೈಹಿಕ ಚಟುವಟಿಕೆ ಕಡಿಮೆಯಾಗುವುದು ಸಹಜ. ಮನೆಕೆಲಸ, ಆಫೀಸ್ ಕೆಲಸಗಳ ನಡುವೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತಾಳುವುದರಿಂದ ವ್ಯಾಯಾಮ ಇಲ್ಲದೆ ಕುಳಿತುಕೊಳ್ಳುವ ಜೀವನಶೈಲಿ ಹೆಚ್ಚಾಗಿ, ಕೊಬ್ಬು ಶೇಖರಣೆಯಾಗುತ್ತದೆ.

2. ಹೆಚ್ಚಿನ ಒತ್ತಡ: ಕುಟುಂಬ, ಉದ್ಯೋಗದ ಒತ್ತಡದಿಂದ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಉತ್ಪತ್ತಿಯಾಗಿ ಹಸಿವು ಹೆಚ್ಚಿಸಿ, ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚುತ್ತದೆ.

3. ಕಡಿಮೆಯಾದ ಮೆಟಬಾಲಿಸಂ: ವಯಸ್ಸಾದಂತೆ ಮೆಟಬಾಲಿಸಂ ಕಡಿಮೆಯಾಗುತ್ತದೆ. ಅಂದರೆ, ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೆಚ್ಚಿನ ಕ್ಯಾಲೊರಿ ಇರುವ ಆಹಾರ ಸೇವಿಸುವುದರಿಂದ ಕೊಬ್ಬು ಶೇಖರಣೆಯಾಗುತ್ತದೆ.

4. ಹಾರ್ಮೋನುಗಳ ಅಸಮತೋಲನ: ಋತುಚಕ್ರ, ಗರ್ಭಧಾರಣೆ, ಪ್ರಸವ ಹಂತಗಳಲ್ಲಿ ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ನಡುವಿನ ಅಸಮತೋಲನ ತೂಕ ಹೆಚ್ಚುವಿಕೆಗೆ ಕಾರಣವಾಗುತ್ತದೆ. ಥೈರಾಯ್ಡ್ ಸಮಸ್ಯೆಯಿಂದಲೂ ತೂಕ ಹೆಚ್ಚಬಹುದು.

ವಯಸ್ಸಾದಂತೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆಹಾರ ಪದ್ಧತಿ, ನಿದ್ರೆ, ವ್ಯಾಯಾಮ, ಒತ್ತಡ ನಿರ್ವಹಣೆಯಲ್ಲಿ ಶಿಸ್ತು ಪಾಲಿಸುವುದರಿಂದ ಆರೋಗ್ಯವಾಗಿರಬಹುದು. ಜೀವನಶೈಲಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡರೆ, ವಯಸ್ಸಾದರೂ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಬಹುದು.

Source link

Leave a Reply

Your email address will not be published. Required fields are marked *