23ನೇ ಜೂನ್ 2025 ಸೋಮವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ
ಮೇಷ(Aries): ಆಗಬೇಕಾದ ಕೆಲಸಗಳನ್ನು ಮುಂದು ಹಾಕುತ್ತೀರಿ. ಇದರಿಂದ ಬಾಕಿ ಕೆಲಸಗಳ ಗುಡ್ಡ ಬೆಳೆಯುತ್ತಾ ಹೋಗುವುದು. ಮಾತುಗಾರಿಕೆ ಚೆನ್ನಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಸಂಬಂಧಗಳು ಗಟ್ಟಿಯಾಗುತ್ತವೆ. ವಿಷ್ಣು ಸಹಸ್ರನಾಮ ಪಠಿಸಿ.
ವೃಷಭ(Taurus): ಸ್ಪರ್ಧೆಯಲ್ಲಿ ನೀವು ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ. ಗುರಿಯತ್ತ ಗಮನವನ್ನು ಇರಿಸಿ. ಬೆಳವಣಿಗೆಯಲ್ಲಿ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಯೋಜನೆ ಮಾಡಿ. ದೊಡ್ಡ ಲಾಭವಾಗಲಿದೆ. ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ಗುರು ರಾಘವೇಂದ್ರರ ಸ್ಮರಣೆ ಮಾಡಿ.
ಮಿಥುನ(Gemini): ಧೈರ್ಯ ಬಲವಾಗಿ ಉಳಿಯಲಿದೆ. ಸಂವಹನ ಸಾಮರ್ಥ್ಯ ಹೆಚ್ಚಲಿದೆ. ಯೋಜನೆಗಳು ವೇಗ ಪಡೆದುಕೊಳ್ಳಲಿವೆ. ಗುರಿಗಳೆಡೆ ಇಂದು ಪ್ರಯತ್ನಗಳು ಸಕ್ರಿಯವಾಗಿರುತ್ತವೆ. ಪ್ರೀತಿಪಾತ್ರರೊಡನೆ ಉತ್ತಮ ಮಾತುಕತೆ ನಡೆಯಲಿದೆ. ಗೌಪ್ಯತೆಯನ್ನು ಗೌರವಿಸಿ. ಮನೆ ದೇವರ ಸ್ಮರಣೆ ಮಾಡಿ.
ಕಟಕ(Cancer): ವ್ಯಾಪಾರ ಸುಧಾರಿಸಲಿದೆ. ನಿಮ್ಮ ಕೆಲಸದ ವೇಗ ಹೆಚ್ಚಾಗುತ್ತದೆ. ಆರ್ಥಿಕ ಶಕ್ತಿ ಉಳಿಯುತ್ತದೆ. ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವಿರಿ. ವೈಯಕ್ತಿಕ ಸಂಬಂಧಗಳಲ್ಲಿ ಉತ್ತಮವಾಗಿರುತ್ತೀರಿ. ಆರೋಗ್ಯ ಕಿರಿಕಿರಿ ಇರುವುದು. ಧನ್ವಂತರಿ ಸ್ಮರಣೆ ಮಾಡಿ.
ಸಿಂಹ(Leo): ವ್ಯಾಪಾರವು ಉತ್ತಮ ಸ್ಥಿತಿಯಲ್ಲಿರುತ್ತದೆ. ಅಡೆತಡೆಗಳು ನಿವಾರಣೆಯಾಗುತ್ತವೆ. ಬಯಸಿದ ಫಲಿತಾಂಶಗಳನ್ನು ಸಾಧಿಸಲಾಗುವುದು. ನಿಮ್ಮ ಮೇಲಧಿಕಾರಿಗಳ ಮಾತನ್ನು ಆಲಿಸಿ. ಬುದ್ಧಿವಂತಿಕೆಯಿಂದ ವರ್ತಿಸಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ.
ಕನ್ಯಾ(Virgo): ಅದೃಷ್ಟ ಮೇಲುಗೈ ಸಾಧಿಸುತ್ತದೆ. ಮುಖ್ಯವಾಗಿ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯುತ್ತವೆ. ಎಲ್ಲರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುತ್ತೀರಿ. ಆರೋಗ್ಯ ಸುಧಾರಿಸುತ್ತದೆ. ಸಂಪತ್ತು ವೃದ್ಧಿಯಾಗಲಿದೆ. ವೃತ್ತಿಪರತೆಯನ್ನು ಹೆಚ್ಚಿಸಿ. ಶ್ರೀ ಕೃಷ್ಣನಿಗೆ ತುಳಸಿ ಅರ್ಪಿಸಿ.
ತುಲಾ(Libra): ನೀವು ಇಂದು ಬಿಡುವಿಲ್ಲದ ದಿನವನ್ನು ಹೊಂದಿರುತ್ತೀರಿ. ಆಡಳಿತಾತ್ಮಕ ಪ್ರಯತ್ನಗಳು ವೇಗಗೊಳ್ಳುತ್ತವೆ. ನಿಮ್ಮ ಯೋಜನೆಗಳು ವೇಗಗೊಳ್ಳುತ್ತವೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಶುಭ ದಿನ. ರಾಮ ಧ್ಯಾನ ಮಾಡಿ.
ವೃಶ್ಚಿಕ(Scorpio): ಆಡಳಿತ ಕಾರ್ಯಕ್ಕೆ ಇಂದು ಉತ್ತಮ ಸಮಯ. ಶಿಸ್ತು ಇರುತ್ತದೆ. ವ್ಯವಸ್ಥೆಯನ್ನು ಗೌರವಿಸಿ. ನಿರ್ವಹಣಾ ಕಾರ್ಯವನ್ನು ತ್ವರಿತಗೊಳಿಸಿ. ವೈಯಕ್ತಿಕ ಪ್ರಯತ್ನಗಳಲ್ಲಿ ನೆಮ್ಮದಿ ಇರುತ್ತದೆ. ಪ್ರತಿಷ್ಠೆ ಬಲ ಸಿಗಲಿದೆ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಗಾತಿಯ ಸಲಹೆ ಪಡೆಯಿರಿ. ಗುರುಪಾದುಕಾ ಸ್ತೋತ್ರ ಹೇಳಿಕೊಳ್ಳಿ.
ಧನುಸ್ಸು(Sagittarius): ಮಾತುಕತೆಗಳಲ್ಲಿ ಯಶಸ್ವಿಯಾಗುವಿರಿ. ಹೊಸ ಯೋಜನೆಗಳು ರೂಪುಗೊಳ್ಳುತ್ತವೆ. ಒಳ್ಳೆಯ ಆಫರ್‌ಗಳು ಸಿಗಲಿವೆ. ಸೌಕರ್ಯಗಳು ಹೆಚ್ಚಾಗಲಿವೆ. ಗುರಿಯತ್ತ ಗಮನವನ್ನು ಇರಿಸಿ. ನಿಮಗೆ ಕುಟುಂಬ ಸದಸ್ಯರ ಸಹಕಾರ ದೊರೆಯಲಿದೆ. ಕುಲ ದೇವರಿಗೆ ತುಪ್ಪದ ದೀಪ ಹಚ್ಚಿ.
ಮಕರ(Capricorn): ತಾಳ್ಮೆ ಮತ್ತು ವೃತ್ತಿಪರತೆ ಪ್ರದರ್ಶಿಸಿ. ಮೇಲಧಿಕಾರಿಗಳ ವಿಶ್ವಾಸ ಗಳಿಸುವಿರಿ. ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ನೀವು ಗಮನ ಹರಿಸಬೇಕು. ಮಕ್ಕಳ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ವಿಚಾರಿಸಿ. ಮನೆ ಹಿರಿಯರೊಂದಿಗೆ ಸಮಯ ಕಳೆಯಿರಿ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.
ಕುಂಭ(Aquarius): ಇಂದು ಕೆಲಸ ಕಡಿಮೆ, ಆಪ್ತರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಕುಟುಂಬದೊಳಗಿನ ಮೌನ ಘರ್ಷಣೆಗಳು ಕಾಡಬಹುದು. ತಂದೆ ತಾಯಿಯ ಅಗತ್ಯಗಳ ಕಡೆ ಗಮನ ಹರಿಸಿ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಹೇಳಿಕೊಳ್ಳಿ.
ಮೀನ(Pisces): ವಿತ್ತೀಯ ಲಾಭ- ಅವಕಾಶಗಳು ಹೆಚ್ಚಾಗುತ್ತವೆ. ಹಣಕಾಸಿನ ಸಾಧನೆಗಳು ಉತ್ಸಾಹವನ್ನು ಹೆಚ್ಚಿಸುತ್ತವೆ. ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ಪ್ರೀತಿಪಾತ್ರರ ಜೊತೆ ನಿಮ್ಮ ಸಮಯವನ್ನು ನೀವು ಆನಂದಿಸುವಿರಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ.