Travel Insurance: ಅಂತರರಾಷ್ಟ್ರೀಯ ಪ್ರಯಾಣ ವಿಮೆ: ಸಂಪೂರ್ಣ ಮಾರ್ಗದರ್ಶಿ ಮತ್ತು ಸಲಹೆಗಳು

Travel Insurance: ಅಂತರರಾಷ್ಟ್ರೀಯ ಪ್ರಯಾಣ ವಿಮೆ: ಸಂಪೂರ್ಣ ಮಾರ್ಗದರ್ಶಿ ಮತ್ತು ಸಲಹೆಗಳು


ಇತ್ತೀಚಿಗಷ್ಟೇ ಅಹಮದಾಬಾದ್ ನಲ್ಲಿ ನಡೆದಂತಹ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಹಲವು ರೀತಿಯ ವಿಮೆಗಳು ಇವೆ. ಆದರೆ ಅವುಗಳ ಖಚಿತ ಮಾಹಿತಿ ಹೆಚ್ಚಿನ ಜನರಿಗೆ ಇಲ್ಲ. ಅದರಲ್ಲಿ ವಿಮಾನಯಾನದ ವಿಮೆ air travel insurance ಮತ್ತು ಅಂತರ್ರಾಷ್ಟ್ರೀಯ ಪ್ರಯಾಣದ ವಿಮೆ. ವಿಮಾ ನಿಯಂತ್ರಣ ಪ್ರಾಧಿಕಾರ ವಿಮೆಗಳ ಬಗ್ಗೆ ಮಾಹಿತಿಯನ್ನು ನಾಗರಿಕರಿಗೆ ತಲುಪಿಸುವಂತಹ ಯೋಜನೆಯನ್ನು ನಿರೂಪಿಸಿ ಅದನ್ನು ಜಾರಿಗೆ ತರಬೇಕು. ಪದವಿ ಶಿಕ್ಷಣದಲ್ಲಿ ಸಂವಿಧಾನದ ಬಗೆಗಿನ ಪಠ್ಯ ಹೇಗೆ ಕಡ್ಡಾಯ ಮಾಡಲಾಗಿದೆಯೋ ಅದರಂತೆ ಸರಕಾರಿ ಯೋಜನೆಗಳು ಮತ್ತು ವಿಮೆ ಪಠ್ಯವನ್ನು ಕೂಡ ಸೇರ್ಪಡೆ ಗೊಳಿಸಬೇಕು. ಅಂತರರಾಷ್ಟ್ರೀಯ ಪ್ರಯಾಣ ವಿಮೆ ಅನಿರೀಕ್ಷಿತ ಘಟನೆಗಳು—ವೈದ್ಯಕೀಯ ತುರ್ತುಸ್ಥಿತಿ, ಪ್ರವಾಸ ರದ್ದು, ಸಾಮಾನು ಕಳೆದುಹೋಗುವುದು, ವಿಳಂಬ, ಅಪಘಾತ—ಇತ್ಯಾದಿಗಳಲ್ಲಿ ಆರ್ಥಿಕ ರಕ್ಷಣೆ ನೀಡುತ್ತದೆ.

ವಿಮೆಯ ಅಗತ್ಯತೆ ಏಕೆ?

ಅಂತರರಾಷ್ಟ್ರೀಯ ಪ್ರವಾಸದಲ್ಲಿ ಅನೇಕ ಅನಿಶ್ಚಿತತೆಗಳು ಎದುರಾಗಬಹುದು. ವಿಮೆಯಿಲ್ಲದೆ ವೆಚ್ಚ ಭಾರಿಯಾಗಬಹುದು.

ಸಾಮಾನ್ಯವಾಗಿ ಒಳಗೊಂಡಿರುವ ಅಂಶಗಳು:

  • ವೈದ್ಯಕೀಯ ವೆಚ್ಚಗಳು (ಚಿಕಿತ್ಸೆ, ಆಸ್ಪತ್ರೆ, ಔಷಧಿ)
  • ಪ್ರವಾಸ ರದ್ದು/ವಿಳಂಬ ವೆಚ್ಚ
  • ಸಾಮಾನು ನಷ್ಟ/ಹಾನಿ
  • ತುರ್ತು ಸ್ಥಳಾಂತರ
  • ಅಪಘಾತ ಸಾವು/ಅಂಗವಿಕಲತೆ
  • 24/7 ತುರ್ತು ಸಹಾಯ

ವಿಮೆಯ ಪ್ರಮುಖ ವಿಧಗಳು:

  • ಏಕ ಪ್ರವಾಸ ಒಂದು ನಿರ್ದಿಷ್ಟ ಪ್ರವಾಸಕ್ಕೆ ಮಾತ್ರ
  • ವಾರ್ಷಿಕ/ಬಹು ಪ್ರವಾಸ ವರ್ಷವಿಡೀ ಅನೇಕ ಪ್ರಯಾಣಗಳಿಗೆ
  • ವೈದ್ಯಕೀಯ ವಿಮೆ ವೈದ್ಯಕೀಯ ವೆಚ್ಚಗಳಿಗೆ ಕೇಂದ್ರೀಕೃತ
  • ಸ್ಥಳಾಂತರ ವಿಮೆ ತುರ್ತು ವೈದ್ಯಕೀಯ ಸ್ಥಳಾಂತರ ಖರ್ಚು
  • ಸಾಮಾನು ವಿಮೆ ವಸ್ತು ನಷ್ಟಕ್ಕೆ ಪರಿಹಾರ
  • ಸಾಹಸ ಕವರೇಜ್ ವಿಶೇಷ ಚಟುವಟಿಕೆಗಳಿಗೆ ಕವರೇಜ್

ಸರಿಯಾದ ವಿಮೆ ಆಯ್ಕೆ ಮಾಡಲು:

  • ನಿಮ್ಮ ಆರೋಗ್ಯ, ಪ್ರಯಾಣ ಅವಧಿ, ಚಟುವಟಿಕೆಗಳು ಪರಿಗಣಿಸಿ
  • ಪಾಲಿಸಿ ಮಿತಿಗಳು, ಹೊರಗಿಡುವಿಕೆಗಳು ಓದಿ
  • ಮೊದಲು ಇದ್ದ ರೋಗಗಳು ಘೋಷಿಸಿ
  • ವಿಮೆ ಅವಧಿ ನಿಮ್ಮ ಪ್ರವಾಸಕ್ಕೆ ಸರಿಹೊಂದಿರಲಿ

ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು?

  • ವಿಮಾ ಪೂರೈಕೆದಾರರನ್ನು ತಕ್ಷಣ ಸಂಪರ್ಕಿಸಿ
  • ವೈದ್ಯಕೀಯ ಆರೈಕೆ ಪಡೆಯಿರಿ, ರಶೀದಿಗಳನ್ನು ಉಳಿಸಿ
  • ಘಟನೆ ದಾಖಲೆ (ಫೋಟೋ, ಪೊಲೀಸ್ ವರದಿ) ಇಟ್ಟುಕೊಳ್ಳಿ
  • ಸಮಯಕ್ಕೆ ಸರಿಯಾಗಿ ಕ್ಲೈಮ್ ಸಲ್ಲಿಸಿ

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *