ನ್ಯೂಯಾರ್ಕ್: 2025ನೇ ಸಾಲಿನ ಯುಎಸ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿಯ ಬಹುಮಾನ ಮೊತ್ತದಲ್ಲಿ ಭಾರೀ ಏರಿಕೆ ಕಂಡಿದೆ. ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗುವವರಿಗೆ ಟೆನಿಸ್ ಇತಿಹಾಸದಲ್ಲೇ ಗರಿಷ್ಠ ಮೊತ್ತದ ನಗದು ಬಹುಮಾನ ಪಡೆಯಲಿದ್ದಾರೆ.

ಈ ಬಾರಿ ಯುಎಸ್ ಓಪನ್ ಟೆನಿಸ್ ಟೂರ್ನಿಯ ಬಹುಮಾನ ಮೊತ್ತದಲ್ಲಿ ಭಾರೀ ಏರಿಕೆಯಾಗಿದೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತವನ್ನು 85 ಮಿಲಿಯನ್ ಯುಎಸ್ ಡಾಲರ್(745 ಕೋಟಿ ರು.)ಗೆ ಹೆಚ್ಚಿಸಲಾಗಿದೆ. ಇದು ಟೆನಿಸ್ ಇತಿಹಾಸದಲ್ಲೇ ಗರಿಷ್ಠ ಮೊತ್ತ.

ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗುವವರಿಗೆ ತಲಾ 5 ಮಿಲಿಯನ್ ಡಾಲರ್(₹43 ಕೋಟಿ) ನಗದು ಬಹುಮಾನ ಲಭಿಸಲಿದೆ. ಇದು ಕಳೆದ ಬಾರಿಗಿಂತ ಶೇ.39ರಷ್ಟು ಹೆಚ್ಚು.

2024ರಲ್ಲಿ ಸಿಂಗಲ್ಸ್ ವಿಭಾಗದ ವಿಜೇತರಿಗೆ ₹31 ಕೋಟಿ ಬಹುಮಾನ ಲಭಿಸಿದ್ದವು. ಈ ಬಾರಿ ಸಿಂಗಲ್ಸ್‌ನ ರನ್ನರ್-ಅಪ್‌ಗೆ ₹21.9 ಕೋಟಿ, ಡಬಲ್ಸ್ ವಿಜೇತರಿಗೆ ₹8.7 ಕೋಟಿ ನಗದು ಬಹುಮಾನ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

2024ರ ಯುಎಸ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಯಾನಿಕ್ ಸಿನ್ನರ್ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಅರೈನ್ ಸಬಲೆಂಕಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಬಹುನಿರೀಕ್ಷಿತ 2025ನೇ ಸಾಲಿನ ಯುಎಸ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿಯು ಇದೇ ಆಗಸ್ಟ್ 24ರಿಂದ ಸೆಪ್ಟೆಂಬರ್ 07ರವರೆಗೆ ನಡೆಯಲಿದೆ.

Source link
ಯುಎಸ್ ಓಪನ್: ಈ ಸಲ ₹745 ಕೋಟಿ ಬಹುಮಾನ, ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗುವವರಿಗೆ ಟೆನಿಸ್ ಇತಿಹಾಸದ ಗರಿಷ್ಠ ನಗದು ಬಹುಮಾನ!