Video: ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ

Video: ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ


ಗುರುಗ್ರಾಮ, ಜೂನ್ 27: ಟೆಕ್ಕಿಯೊಬ್ಬ ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಪರಿಣಾಮ ಓರ್ವ ಅಮಾಯಕನ ಪ್ರಾಣ ಹೋಗಿದೆ. ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಸಿವಿಲ್ ಇಂಜಿನಿಯರ್ ಕಾರು ಚಲಾಯಿಸುವಾಗ ನಿದ್ರೆ ಬಂದ ಪರಿಣಾಮ ನಿಯಂತ್ರಣ ತಪ್ಪಿ ಕಾನೂನು ವಿದ್ಯಾರ್ಥಿಯ ಮೇಲೆ ಕಾರು ಹತ್ತಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾನೂನು ವಿದ್ಯಾರ್ಥಿ ಹರ್ಷ್ ತನ್ನ ಸ್ನೇಹಿತ ಮೋಕ್ಷ ಜತೆ ದೆಹಲಿ-ಜೈಪುರ ಹೆದ್ದಾರಿಯಲ್ಲಿರುವ ಚಂಚಲ್ ಢಾಬಾಗೆ ಹೋಗಿದ್ದರು.

ಢಾಬಾದಲ್ಲಿ ಹೆಚ್ಚು ಜನರಿದ್ದ ಕಾರಣ ಹರ್ಷ್‌ನ ಮತ್ತೊಬ್ಬ ಸ್ನೇಹಿತ ಅಭಿಷೇಕ್ ಕೂಡ ಅಲ್ಲಿಗೆ ಬಂದಿದ್ದಾರೆ.ಇಬ್ಬರೂ ಸರ್ವಿಸ್ ರಸ್ತೆ ರೇಲಿಂಗ್‌ನಲ್ಲಿ ಒಟ್ಟಿಗೆ ನಿಂತು ಮಾತನಾಡುತ್ತಿದ್ದರು. ಈ ಮಧ್ಯೆ, ವೇಗವಾಗಿ ಬಂದ ಕಾರು ಕಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ.

ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಕಾನೂನು ವಿದ್ಯಾರ್ಥಿ ಹರ್ಷ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಇಂಜಿನಿಯರ್ ಮೋಹಿತ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಆತ ಒಪ್ಪಿಕೊಂಡಿದ್ದಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 



Source link

Leave a Reply

Your email address will not be published. Required fields are marked *