Headlines

Video: ಸೋಶಿಯಲ್​​ ಮೀಡಿಯಾದಲ್ಲಿ ಅರಿಶಿನ ಪುಡಿ ಟ್ರೆಂಡ್​​, ಯಾಕೆ ಗೊತ್ತಾ? ಇಲ್ಲಿದೆ ನೋಡಿ

Video: ಸೋಶಿಯಲ್​​ ಮೀಡಿಯಾದಲ್ಲಿ ಅರಿಶಿನ ಪುಡಿ ಟ್ರೆಂಡ್​​, ಯಾಕೆ ಗೊತ್ತಾ? ಇಲ್ಲಿದೆ ನೋಡಿ


ಈ ಸೋಶಿಯಲ್​​ ಮೀಡಿಯಾದಲ್ಲಿ ಒಂದಲ್ಲ ಒಂದು ವಿಷಯದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಅದರಲ್ಲೂ ಭಾರತದಲ್ಲಿ ಹೊಸ ಟ್ರೆಂಡ್​​ಗಳನ್ನು ಹುಟ್ಟು ಹಾಕುವ ಸೃಷ್ಟಿಕರ್ತರು ಹೆಚ್ಚಾಗಿಯೇ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿರುವುದು  ಅರಶಿನ “ಮ್ಯಾಜಿಕಲ್ ಸ್ಪ್ಲಾಶ್” ಪ್ರಯೋಗ . ಈ ಮ್ಯಾಜಿಕಲ್ ಸ್ಪ್ಲಾಶ್​​ಗೆ  ಅರಿಶಿನ, (turmeric) ನೀರು ಮತ್ತು ಮೊಬೈಲ್ ಟಾರ್ಚ್ ಇದ್ರೆ ಸಾಕು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟವಾಗಿರುವ  ಈ ಟ್ರೆಂಡ್​​ ಸಖತ್​​​​​​​ ವೈರಲ್​ ಆಗುತ್ತಿದೆ. ಇನ್ನು ಕೆಲವರು ವಿಭಿನ್ನವಾಗಿ ಈ ಬಗ್ಗೆ ಟ್ರೆಂಡ್​​​ ಮಾಡಿ ವೈರಲ್​ ಆಗುತ್ತಿದ್ದಾರೆ. ಈ DIY ದೃಶ್ಯದ ವೀಡಿಯೊಗಳು Instagram, YouTube ಮತ್ತು WhatsApp ಹೀಗೆ ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಯಲ್ಲೂ ವೈರಲ್​ ಆಗಿದೆ. ಇದೊಂದು ಮಾಂತ್ರಿಕ ವಿಜ್ಞಾನದಂತೆ ಕಾಣುತ್ತಿದೆ. ಇದನ್ನು ಮಾಡಲು ಒಂದು ಲೋಟ ನೀರು, ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಒಂದು ಫೋನ್ ಟಾರ್ಚ್ ಇದ್ರೆ ಸಾಕು.

ಇವುಗಳನ್ನು ಬಳಸಿಕೊಂಡು ಕತ್ತಲೆ ಕೊಣೆಯಲ್ಲಿ ಒಂದು ಲೋಟ ನೀರನ್ನು ತೆಗೆದುಕೊಂಡು, ಅದನ್ನು ಮೊಬೈಲ್​​ ಟಾರ್ಚ್ ಮೇಲೆ ಇಟ್ಟು, ಆ ನೀರಿಗೆ ಅರಶಿನ ಪುಡಿ ಹಾಕಿ, ನಿಮ್ಮ ಮುಖವನ್ನು ಹತ್ತಿರ ತೆಗೆದುಕೊಂಡು ನೋಡಿ. ಅದರ ಲೈಟ್‌ಗೆ ನಿಮ್ಮ ಮುಖ ಹೊಳೆಯುತ್ತದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೊದಲು ಒಳ್ಳೆಯ ಮ್ಯೂಸಿಕ್ ಹಾಕಿ, ಎಡಿಟ್​ ಮಾಡಿ. ನಂತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​​ ಮಾಡಿ. ಈಗ ಅನೇಕರು ಸೋಶಿಯಲ್​​ ಮೀಡಿಯಾ ಈ ರೀತಿ ಮಾಡಿ ಟ್ರೆಂಡ್​​ ಆಗುತ್ತಿದ್ದಾರೆ.

ಇದನ್ನೂ ಓದಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ಪ್ರಯೋಗವನ್ನು ಮನೆಯಲ್ಲಿ ತಾಯಂದಿರು ತಮ್ಮ ಚಿಕ್ಕ ಮಕ್ಕಳ ಜತೆ ಟ್ರೆಂಡ್​​ ಮಾಡಿ ಸೋಶಿಯಲ್​​ ಮೀಡಿಯಾದಲ್ಲಿ ಹಾಕುತ್ತಿದ್ದಾರೆ.  ಹೀಗೆ ಮಗುವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಗುವಿನ ನಗು ಎಲ್ಲರಿಗೂ ಮೆಚ್ಚುಗೆ ಆಗಿದೆ ಹಾಗೂ ಆ ಮಗು ಈ ಬೆಳಕನ್ನು ಕಂಡು ಅಚ್ಚರಿಯಿಂದ ನೋಡುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದು. ಈ ರೀತಿ ಮ್ಯಾಜಿಕ್​​​​ ಪ್ರಯೋಗವನ್ನು ಮಕ್ಕಳು, ವಿದ್ಯಾರ್ಥಿಗಳು, ಅದರಲ್ಲೂ ಈ ಯುವಕರು ಹೆಚ್ಚು ಮಾಡುತ್ತಿದ್ದಾರೆ. ಇನ್ನು ಕೆಲವರು ಇದನ್ನು ಮಿಮ್ಸ್​​​ ಆಗಿ ಪರಿವರ್ತಿಸಿದ್ದಾರೆ. ಇಡೀ ಜಗತ್ತು ಯುದ್ಧದಲ್ಲಿ ಮುಳುಗಿದೆ, ಆದರೆ ಭಾರತದಲ್ಲಿ ಮಾತ್ರ ಅರಿಶಿನ ಟ್ರೆಂಡ್​​ ಆಗುತ್ತಿದೆ. ಕೆಲವೊಂದು ವಿಡಿಯೋಗಳನ್ನು ತುಂಬಾ ತಮಾಷೆಯಾಗಿ ಮಾಡಿದ್ದಾರೆ. ಒಂದು ಗ್ಲಾಸ್​​ಗೆ ಸೋಡಾ ಹಾಕಿ, ಅದನ್ನು ಫೋನ್​​​ ಟಾರ್ಚ್​​​ಗೆ ಇಟ್ಟು ಆ ಗ್ಲಾಸ್​​ಗೆ ಅರಿಶಿನ ಬದಲು ವಿಸ್ಕಿ, ಇತರ ಮದ್ಯಗಳನ್ನು ಹಾಕಿ ಟ್ರೆಂಡ್​​ ಕ್ರಿಯೆಟ್ ಮಾಡಿದ್ದಾರೆ.

ಇದನ್ನೂ ಓದಿ: ಈಗೀಗ ಗಂಡಂದಿರು ಹೆಂಡ್ತಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ತಿದ್ದಾರೆ, ಯಾಕೆ ಗೊತ್ತಾ? ಈ ವಿಡಿಯೋ ನೋಡಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪ್ರವೃತ್ತಿ ಬಗ್ಗೆ ಹೆಚ್ಚು ಕುತೂಹಲದಲ್ಲಿದ್ದಾರೆ. ಈ “ಮ್ಯಾಜಿಕಲ್ ಸ್ಪ್ಲಾಶ್” ಕೆಲವೊಮ್ಮೆ ವಿಜ್ಞಾನದ ಮ್ಯಾಜಿಕ್ ಆಗಬಹುದು ಎಂಬುದಕ್ಕೆ ಈ ವಿಡಿಯೋಗಳೇ ಸಾಕ್ಷಿಯಾಗಿದೆ. ಇನ್ನು ಕೆಲವರು ಇದೇ ರೀತಿ ಮಾಡಿ… ಮಾಡಿ ಅರಿಶಿನದ ಬೆಲೆಯನ್ನು ಹೆಚ್ಚು ಮಾಡಿಸುವ ಪ್ಲಾನ್​​ ಹಾಕಿಕೊಂಡಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವೊಂದು ಮಿಮ್ಸ್​​​ಗಳಲ್ಲಿ ಮನೆಯಲ್ಲಿ ಈ ಮಕ್ಕಳು ಅರಿಶಿನ​ ಎಲ್ಲ ಖಾಲಿ ಮಾಡುತ್ತಿದ್ದಾರೆ ಎಂದೆಲ್ಲ ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಟ್ರೆಂಡ್​​​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *