ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ವಿಜಯ್‌ ದೇವರಕೊಂಡ-ರಶ್ಮಿಕಾ: ಏನದು ಗೊತ್ತಾ?

ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ವಿಜಯ್‌ ದೇವರಕೊಂಡ-ರಶ್ಮಿಕಾ: ಏನದು ಗೊತ್ತಾ?

ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ವಿಜಯ್‌ ದೇವರಕೊಂಡ-ರಶ್ಮಿಕಾ: ಏನದು ಗೊತ್ತಾ?

ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮೂರನೇ ಸಿನಿಮಾದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ. ಈಗಾಗಲೇ ಇವರಿಬ್ಬರು ತೆಲುಗಿನ ಗೀತ ಗೋವಿಂದಂ ಮತ್ತು ಡಿಯರ್‌ ಕಾಮ್ರೇಡ್‌ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ.

ಟಾಲಿವುಡ್‌ನ ಮೋಸ್ಟ್‌ ರೊಮ್ಯಾಂಟಿಕ್‌ ಜೋಡಿಯಾಗಿ ಗುರುತಿಸಿಕೊಂಡಿರುವ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮೂರನೇ ಸಿನಿಮಾದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ.

ಈಗಾಗಲೇ ಇವರಿಬ್ಬರು ತೆಲುಗಿನ ಗೀತ ಗೋವಿಂದಂ ಮತ್ತು ಡಿಯರ್‌ ಕಾಮ್ರೇಡ್‌ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಇದೀಗ 3ನೇ ಬಾರಿ ಮತ್ತೆ ತೆರೆಮೇಲೆ ಒಂದಾಗಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

‘ಶ್ಯಾಮ್‌ ಸಿಂಗ್‌ ರಾಯ್‌’ ನಂಥಾ ಯಶಸ್ವಿ ಸಿನಿಮಾ ನಿರ್ದೇಶಿಸಿರುವ ರಾಹುಲ್‌ ಸಾಂಕೃತ್ಯಾಯನ್‌ ಈ ಚಿತ್ರ ನಿರ್ದೇಶಿಸಲಿದ್ದಾರೆ. ವಾರದ ಹಿಂದೆಯೇ ಈ ಸಿನಿಮಾ ಶೂಟಿಂಗ್‌ ಆರಂಭವಾಗಬೇಕಿತ್ತು.

ಆದರೆ ನಾಯಕ ವಿಜಯ ದೇವರಕೊಂಡ ಡೆಂಗ್ಯೂವಿಗೆ ತುತ್ತಾದ ಹಿನ್ನೆಲೆಯಲ್ಲಿ ಶೂಟಿಂಗ್‌ ಮುಂದಕ್ಕೆ ಹೋಗಿದೆ. ಇನ್ನು ಈ ಸುದ್ದಿ ಕೇಳಿ ಫ್ಯಾನ್ಸ್‌ ರೋಮಾಂಚನಗೊಂಡಿದ್ದು, ಶೀರ್ಷಿಕೆ ಇನ್ನೂ ಅಂತಿಮವಾಗದ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ವಿಡಿ 14 (VD 14) ಎಂದು ಹೆಸರಿಡಲಾಗಿದೆ.

ಸದ್ಯ ರಶ್ಮಿಕಾ ತಮ್ಮ ಮುಂದಿನ ಹಿಂದಿ ಸಿನಿಮಾ ಥಮ್ಮದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯದಲ್ಲೇ ವಿಡಿ 14 ಶೂಟಿಂಗ್‌ ಕೂಡ ಆರಂಭವಾಗಲಿದ್ದು, ರಶ್ಮಿಕಾ ಏಕಕಾಲಕ್ಕೆ ಎರಡೂ ಕಡೆ ಭಾಗಿಯಾಗಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *