ಬೆಂಗಳೂರಿನ ಅದೆಷ್ಟೋ ಜನರು ನೋಡಿದ ತಕ್ಷಣ ಅವರನ್ನು ಉತ್ತರ ಭಾರತದವರು ಎಂದು ಹೇಳುತ್ತಾರೆ. ಇನ್ನು ಕೆಲವರು ಭಾಷೆ ಹಾಗೂ ಮೈಬಣ್ಣಗಳು ಉತ್ತರ ಭಾರತದವರಂತೆ ಕಾಣುತ್ತಾರೆ. ಆದರೆ ಅವರು ಮೂಲತಃ ಹಾಗೂ ಅವರ ಕುಟುಂಬದವರು ಇಲ್ಲಿಯವರೇ ಆಗಿರುತ್ತಾರೆ. ಇದೀಗ ಇಂತಹದೇ ಒಂದು ವಿಚಾರದ ಬಗ್ಗೆ ಉದ್ಯಮಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೃಜನ್ ಆರ್ ಶೆಟ್ಟಿ ಎಂಬುವವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹೊರಗಿನವರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಚರ್ಚೆ ಆಗುತ್ತಿರುವ ಹೊತ್ತಿನಲ್ಲಿ ಈ ಒಂದು ಪೋಸ್ಟ್ ವೈರಲ್ ಆಗಿದೆ. ಸೃಜನ್ ಆರ್ ಶೆಟ್ಟಿ ಅವರು ತಮ್ಮ ನಗರದಲ್ಲಾಗುವ ಕೆಲವೊಂದು ವಿಚಿತ್ರ ಸನ್ನಿವೇಶದ ಬಗ್ಗೆ ತುಂಬಾ ತಮಾಷೆಯಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪರಸ್ಪರ ಆತ್ಮೀಯತೆಯನ್ನು ರೂಪಿಸುವಲ್ಲಿ ಭಾಷೆ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತದೆ ಮತ್ತು ಹೊರಗಿನವರು ಕನ್ನಡ ಮಾತನಾಡಲು ಪ್ರಯತ್ನಿಸುವುದನ್ನು ಕೇಳಿದಾಗ ಸ್ಥಳೀಯರು ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಭಾರತದಲ್ಲಿ ಬೆಳೆದು ಹಿಂದಿ ಮಾತನಾಡುವ ಸೃಜನ್ ಆರ್ ಶೆಟ್ಟಿ ಅವರನ್ನು ಅವರ ಮೈ ಬಣ್ಣ ಹಾಗೂ ಕನ್ನಡ ಮಾತನಾಡುವ ರೀತಿಯನ್ನು ನೋಡಿ, ನೀವು ಉತ್ತರ ಭಾರತದವರ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಇವರ ಕನ್ನಡ ನೋಡಿ, ನೀವು ಮಂಗಳೂರಾ ಎಂದು ಕೇಳಿದ್ದಾರೆ ಎಂದು ತುಂಬಾ ಸ್ವಾರಸ್ಯವಾಗಿ ಇಲ್ಲಿ ಹಂಚಿಕೊಂಡಿದ್ದಾರೆ. ನಾನು ಹೊಸಬರೊಂದಿಗೆ ಕನ್ನಡ ಮಾತನಾಡುವಾಗಲೆಲ್ಲಾ ಅವರ ಕಣ್ಣುಗಳನ್ನು ಗಮನಿಸಿದ್ದೇನೆ. ಅವರು ಕಣ್ಣಿನಲ್ಲೇ ಗೊತ್ತಾಗುತ್ತಿತ್ತು. ಇವರು ನಮ್ಮಲ್ಲಿ ಏನೋ ಬದಲಾವಣೆಯನ್ನು ನೋಡಿದ್ದಾರೆ ಎಂದು. ನಮ್ಮ ಕನ್ನಡವನ್ನು ನೋಡಿ ಅವರಿಗೆ ಎಲ್ಲಿಲ್ಲದ ಸಂತೋಷ ಹಾಗೂ ಕನ್ನಡವನ್ನು ಹೇಗೆ ಕಲಿತರು ಎಂಬ ಬಗ್ಗೆ ಅವರಲ್ಲಿ ಉತ್ಸಾಹ ಮೂಡಿದೆ ಎಂದು ಸೃಜನ್ ಆರ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ
ವೈರಲ್ ಪೋಸ್ಟ್ ಇಲ್ಲಿದೆ ನೋಡು:
An interesting lived experience that I face in Bengaluru – partly due to my Hindi diction, upbringing in North India and also due to skin complexion – is that almost everyone confuses me for a North Indian.
Everytime, I start speaking in Kannada with a stranger, I’m met with…
— Srijan R Shetty (@srijanshetty) June 26, 2025
ಇಂತಹ ಅನೇಕ ಅನುಭವಗಳು ಹಾಗಾಗೆ ಆಗುತ್ತಿರುತ್ತದೆ. ಆವಾಗ್ಲೆ ಹೇಳಿದ್ದುಂಟು ನಾನು ಮಂಗಳೂರಿನವರು ಎಂದು, ಆಗ ಅವರು ನಿಮ್ಮ ಕನ್ನಡ ಉಚ್ಚಾರಣೆಯಲ್ಲಿ ಸ್ವಲ್ಪ ಬದಲಾವಣೆ ಇದೆ ಎಂದು ಹೇಳುತ್ತಾರೆ. ಭಾಷೆ ಮತ್ತು ಗುರುತಿಸುವಿಕೆಯಲ್ಲಿ ರಾಜಕೀಯವಿದ್ದರು, ಬೆಂಗಳೂರಿನ ಹೆಚ್ಚಿನ ಜನರು ನಮ್ಮ ಈ ಕನ್ನಡವನ್ನು ಸ್ವಾಗತಿಸುತ್ತಾರೆ. ಬೆಂಗಳೂರಿನಲ್ಲಿ ಕನ್ನಡದ ಬಗ್ಗೆ ಒತ್ತಾಯ ಅಥವಾ ದಬ್ಬಾಳಿಕೆಯನ್ನು ಮಾಡಿ ಕನ್ನಡ ಮಾತನಾಡಿಸುವವರು ಕಡಿಮೆ ಜನ, ಅವರ ನಡುವೆ ನಮ್ಮ ಕನ್ನಡವನ್ನು ಒಪ್ಪಿಕೊಂಡವರು ಅನೇಕರು ಎಂಬುದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂರು ವರ್ಷಗಳ ಪ್ರೀತಿಗೆ ಶ್ವಾನಗಳೇ ಸಾಕ್ಷಿ, ನಿರಾಶ್ರಿತ ಶ್ವಾನಗಳ ಮುಂದೆ ಮದುವೆಯಾದ ಜೋಡಿ
ರಾಜ್ಯದೊಳಗಿನ ಭಾಷಾ ವೈವಿಧ್ಯತೆಯ ಬಗ್ಗೆ ಹೇಳಿದ ಸೃಜನ್ ಆರ್ ಶೆಟ್ಟಿ, ಕನ್ನಡವು ಅನೇಕ ಪ್ರಾದೇಶಿಕ ರೂಪಾಂತರಗಳನ್ನು ಹೊಂದಿದ್ದು, ಹೊರಗಿನವರಿಗೆ, ವಿಶೇಷವಾಗಿ ಕೊಂಕಣಿ ಪ್ರಭಾವಿತ ಪ್ರದೇಶಗಳಲ್ಲಿ ಅನುಸರಿಸಲು ಕಷ್ಟವಾಗುತ್ತದೆ. ಈ ಸೂಕ್ಷ್ಮ ವ್ಯತ್ಯಾಸಗಳ ಹೊರತಾಗಿಯೂ ಅನೇಕರು ಕನ್ನಡ ಮಾತನಾಡಲು ಪ್ರಯತ್ನಿಸುತ್ತಾರೆ ಎಂದು ಹೇಳಿದ್ದಾರೆ. ನನ್ನ ಅನುಭವದಲ್ಲಿ, ನೀವು ಆ ಭಾಷೆಯನ್ನು ಮಾತನಾಡಲು ಪ್ರಯತ್ನಿಸಿದರೆ, ನಿಮ್ಮನ್ನು ಅವರ ಸ್ವಂತ ವ್ಯಕ್ತಿಯಂತೆ ಪರಿಗಣಿಸುತ್ತಾರೆ. ಸೃಜನ್ ಆರ್ ಶೆಟ್ಟಿ ಅವರು ಈ ಪೋಸ್ಟ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ನಾನು ತುಳು ಮಾತನಾಡುವ ಮಂಗಳೂರಿನವನು, ದುಬೈನಲ್ಲಿ ಜನಿಸಿ, ಅಮೆರಿಕದಲ್ಲಿ ವಾಸಿಸುತ್ತಿದ್ದೆ ಮತ್ತು ಈಗ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಆದರೆ ನಿಮ್ಮಂತೆ ಕನ್ನಡ ಮಾತನಾಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ