ಬೆಳಗ್ಗೆ ಮಾಡಿದ ಚಪಾತಿ ಸಂಜೆವರೆಗೂ ಸಾಫ್ಟ್ ಆಗಿರ್ಬೇಕಾ, ಇಲ್ಲಿದೆ ಸೂಪರ್ ಟಿಪ್ಸ್!

ಬೆಳಗ್ಗೆ ಮಾಡಿದ ಚಪಾತಿ ಸಂಜೆವರೆಗೂ ಸಾಫ್ಟ್ ಆಗಿರ್ಬೇಕಾ, ಇಲ್ಲಿದೆ ಸೂಪರ್ ಟಿಪ್ಸ್!

ಹಿಟ್ಟು ಕಲಸುವಾಗ ಸಿಂಪಲ್ ಟೆಕ್ನಿಕ್ಸ್ ಫಾಲೋ ಮಾಡಿದ್ರೆ, ಬೆಳಗ್ಗೆ ಮಾಡಿದ  ಚಪಾತಿ ಸಂಜೆವರೆಗೂ ಮೆದುವಾಗಿ ಇರುತ್ತದೆ.

ಇಂಡಿಯನ್ನರು ಅನ್ನ ಎಷ್ಟು ತಿಂತಾರೋ ಅಷ್ಟೇ ಚಪಾತಿ ಕೂಡ ತಿಂತಾರೆ. ದಿನಾ ಚಪಾತಿ ತಿಂದ್ರೆನೇ ಹೊಟ್ಟೆ ತುಂಬುತ್ತೆ ಅನ್ನೋರು ತುಂಬಾ ಜನ. ಗೋಧಿ ಹಿಟ್ಟಿನ ಚಪಾತಿ ಎಲ್ಲರ ಮನೆಯಲ್ಲೂ ಮಾಡ್ತಾರೆ. ಚಪಾತಿ ಮಾಡಿದ ತಕ್ಷಣ ತಿಂದ್ರೆ ತುಂಬಾ ರುಚಿ. ಆದ್ರೆ ಸ್ವಲ್ಪ ಹೊತ್ತು ಆದ್ಮೇಲೆ ಗಟ್ಟಿಯಾಗಿ ಒಣಗಿ ಹೋಗುತ್ತೆ. ಹಾಗಾಗದೆ ಇರೋಕೆ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ.

ಚಪಾತಿಗೆ ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು – 2 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – ಬೇಕಾದಷ್ಟು, ಎಣ್ಣೆ – 1-2 ಟೀ ಚಮಚ. ಮೆತ್ತಗೆ ರೊಟ್ಟಿ ಬರಬೇಕಾದ್ರೆ ಹಿಟ್ಟು ಕಲಸುವ ವಿಧಾನ ಮುಖ್ಯ. 2 ಕಪ್ ಹಿಟ್ಟಿಗೆ ಉಪ್ಪು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ. ಪೂರಿ ಹಿಟ್ಟಿಗಿಂತ ಮೆತ್ತಗೆ ಕಲಸಬೇಕು. 2 ಚಮಚ ಎಣ್ಣೆ ಹಾಕಿ ಮತ್ತೆ  5 ನಿಮಿಷ ಕಲಸಿ. ಸ್ವಲ್ಪ ಹೊತ್ತು ಹಾಗೆ ಇಡಿ.

ಚಪಾತಿ ಹಿಟ್ಟನ್ನು ತೇವ ಬಟ್ಟೆಯಿಂದ ಮುಚ್ಚಿ 10 ನಿಮಿಷ ಇಡಿ. ಚಿಕ್ಕ ಚಿಕ್ಕ ಉಂಡೆಗಳನ್ನ ಮಾಡಿ. ಒಣ ಹಿಟ್ಟು ಸವರಿ ಲಟ್ಟಿಸಿ. ಒಂದು ಕಡೆ ಎಣ್ಣೆ ಸವರಿ ಮಧ್ಯಕ್ಕೆ ಮಡಿಚಿ. ಪೂರಿ ತರಹ ಉಬ್ಬಬೇಕು. ತವಾ ಬಿಸಿ ಮಾಡಿ ಚಪಾತಿ ಹಾಕಿ 10 ಸೆಕೆಂಡ್ ಬೇಯಿಸಿ. ತಿರುವಿ ಹಾಕಿ ಎಣ್ಣೆ ಸವರಿ ಬೇಯಿಸಿ.

ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಚಪಾತಿ ಮೆತ್ತಗೆ ಇರುತ್ತೆ. ಮಾಡಿದ ತಕ್ಷಣ ಹಾಟ್ ಬಾಕ್ಸ್ ನಲ್ಲಿ ಇಡಿ.

ಚಪಾತಿ  ಹಿಟ್ಟು ಕಲಸುವಾಗ 2 ಚಮಚ ತುಪ್ಪ ಹಾಕಿದ್ರೆ ರೊಟ್ಟಿ ರುಚಿಯಾಗಿ, ಮೆತ್ತಗಾಗಿ ಇರುತ್ತೆ. ಗಂಟೆಗಟ್ಟಲೆ ಒಣಗೋದಿಲ್ಲ.

Source link

Leave a Reply

Your email address will not be published. Required fields are marked *