ನೀವು ಸು ಫ್ರಮ್ ಸೋ ಸಿನಿಮಾ ನೋಡಿ, ಹೊಟ್ಟೆ ಹುಟ್ಟಾಗುವಂತೆ ನಕ್ಕಿದ್ದೀರಾ? ಹಾಗಿದ್ರೆ, ಇಲ್ಲಿದೆ ನಿಮಗಾಗಿ ಬೆಸ್ಟ್ ಕಾಮಿಡಿ ಹಾರರ್ ಸಿನಿಮಾಗಳ ಲಿಸ್ಟ್. ನೋಡಿ ಎಂಜಾಯ್ ಮಾಡಿ.

ನೀವು ಕನ್ನಡದ ಸು ಫ್ರಮ್ ಸೋ ಸಿನಿಮಾ ನೋಡಿ ನಕ್ಕು ನಕ್ಕು ಸುಸ್ತಾಗಿದ್ದೀರಾ? ಇಂತಹ ಹಾರರ್ ಕಾಮಿಡಿ ಇರುವಂತಹ ಸಿನಿಮಾಗಳನ್ನು ನೋಡಲು ಬಯಸಿದ್ದೀರ? ಹಾಗಿದ್ರೆ ಇಲ್ಲಿದೆ ಬೆಸ್ಟ್ ಹಾರರ್ ಕಾಮಿಡಿ ಸಿನಿಮಾಗಳ ಲಿಸ್ಟ್. ನೀವು ಖಂಡಿತವಾಗಿಯೂ ಸಖತ್ ಎಂಜಾಯ್ ಮಾಡ್ತೀರಿ.

ಮಣಿಚಿತ್ರತಾಳಂ

ಇದು ಮಲಯಾಳಂ ಭಾಷೆಯ ಕ್ಲಾಸಿಕ್ ಹಿಟ್ ಸಿನಿಮಾ. ಮೋಹನ್ ಲಾಲ್ ಅಭಿನಯದ ಈ ಸಿನಿಮಾ ಎಲ್ಲಾ ಭಾಷೆಗಳಲ್ಲೂ ರಿಮೇಕ್ ಆಗಿ ಸದ್ದು ಮಾಡಿತ್ತು. ಈ ಸಿನಿಮಾದ ಕಾಮಿಡಿ , ಹಾರರ್ ಜನಮನ ಗೆದ್ದಿತ್ತು.

ಗೋಲ್ ಮಾಲ್ ಅಗೈನ್

ಇದು ಕೂಡ ನಿಮ್ಮನ್ನೆಲ್ಲಾ ನಕ್ಕು ನಗಿಸುವ ಹಾರರ್ ಕಾಮಿಡಿ ಸಿನಿಮಾ. ಇದು ಅನಾಥಾಶ್ರಮದಲ್ಲಿ ನಡೆದಂತಹ ಅಕ್ರಮವನ್ನು ತೋರಿಸುವ ಕಥೆ.

ಭೂತ್ ನಾಥ್

ಇದು ಕೂಡ ಮುದ್ದಾದ ಬಾಲಕನು ತನ್ನ ಫ್ಯಾಮಿಲಿ ಜೊತೆ ಬಂಗಲೆಯೊಂದಕ್ಕೆ ಎಂಟ್ರಿ ಕೊಟ್ಟ ಬಳಿಕ ಏನಾಗುತ್ತದೆ ಅನ್ನೋದು ಕಥೆ. ಆ ಬಂಗಲೆ ಮಾಲಿಕ ಸತ್ತು ಭೂತವಾಗಿ ಮಗುವಿಗೆ ಮಾತ್ರ ಕಾಣಿಸಿಕೊಂಡು, ಸಹಾಯ ಮಾಡುತ್ತಾ ಬರುತ್ತದೆ. ಕೊನೆಗೆ ಕಥೆ ಹೇಗೆ ಕೊನೆಗೊಳ್ಳುತ್ತದೆ ನೀವೆ ನೋಡಿ.

ರೋಮಾಂಚಂ

ಇದು ಮಲಯಾಳಂ ನ ಸೂಪರ್ ಹಿಟ್ ಕಾಮಿಡಿ ಸಿನಿಮಾ. ನಿಜಾ ಕಥೆಯ ಎಳೆಯನ್ನು ಇಟ್ಟುಕೊಂಡು ಮಾಡಿದಂತಹ ಸಿನಿಮಾ. ಓಜೊ ಬೋರ್ಡ್ ಮೂಲಕ ದೆವ್ವವು ಯಾವ ರೀತಿ ಕಾಡುತ್ತದೆ ಅನ್ನೋದು ಸಿನಿಮಾ. ಸಿಂಪಲ್ ಆದರೂ ನಗಿಸುತ್ತಾ ಸಾಗುವ ಕಥೆ.

ಸ್ತ್ರೀ 2

ಸ್ತ್ರೀ ಸಿನಿಮಾದಂತೆ ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಹಾರರ್ ಅನ್ನೋವಂತದ್ದೂ ಏನೂ ಇಲ್ಲದೇ ಇದ್ದರೂ ಕೂಡ, ಕಾಮಿಡಿ, ಪಂಚ್ ಲೈನ್ ಹೊಟ್ಟೆ ಹುಣ್ಣಾಗುವಂತೆ ನಗಿಸಿದಂತೂ ನಿಜಾ.

ಭೂಲ್ ಬುಲಯ್ಯಾ 3

ಭೂತೋಚ್ಚಾಟಕನಂತೆ ನಟಿಸುವ ನಾಯಕನಿಗೆ ಅಲ್ಲಿ ತನ್ನ ಅನುಕೂಲಕ್ಕೆ ತಕ್ಕಂತೆ ಘಟನೆಗಳು ನಡೆದು ಜನರನ್ನು ಸುಲಭವಾಗಿ ವಂಚಿಸಲು ಸಾಧ್ಯವಾಗುತ್ತದೆ. ಬಳಿಕ ಏನೆಲ್ಲಾ ತಿರುವುಗಳು ಸಿಗುತ್ತವೆ ಅನ್ನೋದನ್ನು ನೀವು ನೋಡಬೇಕು. ಈ ಸಿನಿಮಾ ಸಖತ್ ಮನರಂಜನೆ ನೀಡುತ್ತದೆ.

Source link
ಸು ಫ್ರಮ್ ಸೋ ನಂತೆ ಹೊಟ್ಟೆ ಹುಟ್ಟಾಗುವಂತೆ ನಗಿಸುವ ಹಾರರ್ ಕಾಮಿಡಿ ಸಿನಿಮಾಗಳಿವು