Headlines

ಶ್ರಾವಣ ಮಾಸದಲ್ಲಿ ಈ ಆಹಾರ ಸೇವಿಸೋದು ಜೀವಕ್ಕೆ ಮಾರಕ! ತಿನ್ನುವ ಮುನ್ನ ಇರಲಿ ಎಚ್ಚರ!

ಶ್ರಾವಣ ಮಾಸದಲ್ಲಿ ಈ ಆಹಾರ ಸೇವಿಸೋದು ಜೀವಕ್ಕೆ ಮಾರಕ! ತಿನ್ನುವ ಮುನ್ನ ಇರಲಿ ಎಚ್ಚರ!

ಪವಿತ್ರವಾದ ಶ್ರಾವಣ ಮಾಸದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಇದು ಧಾರ್ಮಿಕ ಅಂತ ಅನಿಸಿದರೂ, ಇದರ ಹಿಂದೆ ಇರುವ ವಿಜ್ಞಾನವನ್ನು ನೀವು ಅರ್ಥ ಮಾಡಿಕೊಳ್ಳಬೇಕು.

ಬಹುತೇಕ ಎಲ್ಲಾ ಶಿವನ ಭಕ್ತರು ಶ್ರಾವಣ ಮಾಸಕ್ಕಾಗಿ (Shravana Mas)ಕಾಯುತ್ತಾರೆ. ಶೀಘ್ರದಲ್ಲೇ ಶ್ರಾವಣ ಮಾಸ ಬರಲಿದೆ. ಉತ್ತರ ಭಾರತೀಯರ ಪ್ರಕಾರ ಈ ವರ್ಷ ಜುಲೈ 11 ರಿಂದ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಕರ್ನಾಟಕದಲ್ಲಿ ಜುಲೈ 25 ರಿಂದ ಶ್ರಾವಣ ಮಾಸ ಆರಂಭ. ಈ ತಿಂಗಳಲ್ಲಿ ಕೆಲವು ವಿಷಯಗಳು ನಿಷಿದ್ಧ ಎಂದು ಹಿರಿಯರು ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬೇಕು. ಅದಕ್ಕೆ ಧಾರ್ಮಿಕ ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ.

ಕೆಲವು ವಿಷಯಗಳನ್ನು ತಪ್ಪಿಸಬೇಕು

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ದೈನಂದಿನ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ಜನ ತಮ್ಮ ಜೀವನಶೈಲಿಯನ್ನು (lifestyle) ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಾರೆ. ನಮ್ಮಲ್ಲಿ ತಡವಾಗಿ ಶ್ರಾವಣ ಶುರುವಾದರೂ, ಎರಡೂ ಉತ್ತರ-ದಕ್ಷಿಣ ಭಾರತದ ಆಚರಣೆಗಳು ವಿಭಿನ್ನವಾದರೂ, ಅದರ ಹಿಂದಿರುವ ಶಾಸ್ತ್ರಗಳ ಸಂಪ್ರದಾಯಗಳ ಮೂಲ ಒಂದೇ ಆಗಿದೆ. ಹಾಗಾಗಿ ಈ ಸಮಯದಲ್ಲಿ ನಾವು ಏನನ್ನು ತಿನ್ನಬಾರದು ಅನ್ನೊದನ್ನು ನೋಡೋಣ.

ಡೈರಿ ಉತ್ಪನ್ನ ತಪ್ಪಿಸಿ

ಶ್ರಾವಣ ಮಾಸದಲ್ಲಿ ಹಾಲಿನ ಉತ್ಪನ್ನಗಳನ್ನು (dairy products) ಸೇವಿಸಬಾರದು ಏಕೆಂದರೆ ಈ ಸಮಯದಲ್ಲಿ ಹುಳ ಹುಪ್ಪಟೆಗಳು ಹೆಚ್ಚಾಗಿ ಮಣ್ಣಿನಡಿಯಿಂದ ಮೇಲೆ ಬಂದು ಹುಲ್ಲು ಅಥವಾ ಹಸಿರು ವಸ್ತುಗಳನ್ನು ತಿಂದು ಅವುಗಳಿಗೆ ಸೋಂಕು ತರುತ್ತವೆ. ಹಸು ಅಥವಾ ಎಮ್ಮೆ ಅದೇ ಹುಲ್ಲನ್ನು ತಿನ್ನುತ್ತದೆ, ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

ಮೊಸರು ಸೇವಿಸುವುದನ್ನು ತಪ್ಪಿಸಿ

ಮೊಸರನ್ನು ತಿನ್ನಬಾರದು ಏಕೆಂದರೆ ಈ ದಿನಗಳಲ್ಲಿ ಪರಿಸರದಲ್ಲಿ ತೇವಾಂಶ ಮತ್ತು ಸೂಕ್ಷ್ಮಜೀವಿಗಳು ಹೆಚ್ಚಾಗಿರುತ್ತವೆ, ಇದರಿಂದಾಗಿ ಹಾನಿಕಾರಕ ಬ್ಯಾಕ್ಟೀರಿಯಾಗಳು(bacteria) ಬೆಳೆಯುತ್ತವೆ. ಇದಲ್ಲದೆ, ಮೊಸರಿನ ಪರಿಣಾಮವು ಶೀತವಾಗಿರುತ್ತದೆ, ಹಾಗಾಗಿ ಶೀತ ಮತ್ತು ಕೆಮ್ಮು ಉಂಟಾಗುವ ಸಾಧ್ಯತೆ ಇರುತ್ತದೆ

ಬೆಳ್ಳುಳ್ಳಿ ಸೇವನೆಯನ್ನು ತಪ್ಪಿಸಿ

ಆಯುರ್ವೇದದ ಪ್ರಕಾರ ಮಳೆಯಿಂದಾಗಿ ಜನರ ಜೀರ್ಣಶಕ್ತಿ ದುರ್ಬಲಗೊಳ್ಳುತ್ತದೆ. ಈ ಸಮಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ (garlic and ginger) ಬಿಸಿ ಸ್ವಭಾವವನ್ನು ಹೊಂದಿರುತ್ತವೆ, ಅವುಗಳನ್ನು ತಿನ್ನುವುದರಿಂದ ವಾಯು, ಗ್ಯಾಸ್ ಮತ್ತು ಅಜೀರ್ಣ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಬದನೆಕಾಯಿಯಿಂದ ದೂರವಿರಿ

ಚರಕ ಸಂಹಿತವು ಶ್ರಾವಣ ಮಾಸದಲ್ಲಿ ಬದನೆಕಾಯಿ ತಿನ್ನಬಾರದೆಂದು ಸಲಹೆ ನೀಡುತ್ತದೆ, ಇದಕ್ಕೆ ಮುಖ್ಯ ಕಾರಣ ಅದರ ಸ್ವಭಾವ. ಬದನೆಕಾಯಿ (brinjal) ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬದನೆಕಾಯಿ ಗಿಡದಲ್ಲಿ ಬೆಳೆಯುವ ತರಕಾರಿ’ . ಶ್ರಾವಣ ಮಾಸದಲ್ಲಿ ಆರ್ದ್ರತೆಯಿಂದಾಗಿ, ಅದರಲ್ಲಿ ಕೀಟಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಹಸಿರು ಎಲೆ ತರಕಾರಿಗಳು

ಸುಶ್ರುತ ಸಂಹಿತದಲ್ಲಿ, ಶ್ರಾವಣ ಮಾಸದಲ್ಲಿ ಹಸಿರು ಎಲೆ ತರಕಾರಿಗಳನ್ನು(green vegetables) ತಿನ್ನುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಈ ಋತುವಿನಲ್ಲಿ ನೆಲದಲ್ಲಿರುವ ಹೆಚ್ಚಿನ ಕೀಟಗಳು ಹೊರಬಂದು ಹಸಿರು ಎಲೆ ತರಕಾರಿಗಳಿಗೆ ಸೋಂಕು ತರುತ್ತವೆ, ಇದರಿಂದಾಗಿ ವೈರಲ್ ಸೋಂಕಿನ ಅಪಾಯ ಹೆಚ್ಚಾಗುವ ಭಯವಿದೆ.

Source link

Leave a Reply

Your email address will not be published. Required fields are marked *