ಫೋನ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? ಟೆನ್ಶನ್ ಬಿಡಿ ಈ ಟಿಪ್ಸ್ ಫಾಲೋ ಮಾಡಿ

ಫೋನ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? ಟೆನ್ಶನ್ ಬಿಡಿ ಈ ಟಿಪ್ಸ್ ಫಾಲೋ ಮಾಡಿ



ಸಿಮ್ ಬ್ಲಾಕ್ ಮಾಡಿಸಿ.

ಫೋನ್ ಕಳೆದ ತಕ್ಷಣ ನೆಟ್‌ವರ್ಕ್ ಕಂಪನಿಗೆ ಕರೆ ಮಾಡಿ ಸಿಮ್ ಬ್ಲಾಕ್ ಮಾಡಿಸಿ. ಹೊಸ ಸಿಮ್ ತಗೊಂಡಾಗ ಬ್ಯಾಂಕ್ ಖಾತೆಗಳು, UPI ಆ್ಯಪ್‌ಗಳನ್ನು ಹೊಸ ನಂಬರ್‌ಗೆ ಲಿಂಕ್ ಮಾಡಿ. ಬಯೋಮೆಟ್ರಿಕ್ ಪರಿಶೀಲನೆ DoT ಸಿಮ್ ಬದಲಾಯಿಸಲು ಬಯೋಮೆಟ್ರಿಕ್ ಪರಿಶೀಲನೆ, 24 ಗಂಟೆಗಳ SMS ನಿಷೇಧದಂತಹ ನಿಯಮಗಳನ್ನು ಹಾಕಿದೆ. ಇದು ಸಿಮ್ ಸ್ವಾಪ್ ಮೋಸಗಳನ್ನು ಕಡಿಮೆ ಮಾಡುತ್ತದೆ.

KYM, ASTR ಸೇವೆಗಳು

KYM: ನಿಮ್ಮ ಫೋನ್ IMEI ನಂಬರ್ ಪರಿಶೀಲಿಸಲು ಈ ಸೇವೆ ಬಳಸಿ.

ASTR: ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳನ್ನು ತಿಳಿದುಕೊಳ್ಳಲು, ಮೋಸದ ಸಿಮ್‌ಗಳನ್ನು ಬ್ಲಾಕ್ ಮಾಡಲು ಇದು ಉಪಯುಕ್ತ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಡಿ : ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ವಿವರಗಳು, OTPಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ. ಅನುಮಾನಾಸ್ಪದ ಕರೆಗಳು, ಸಂದೇಶಗಳನ್ನು ಸಂಚಾರ್ ಸಾಥಿ ವೆಬ್‌ಸೈಟ್ (www.sancharsaathi.gov.in) ನಲ್ಲಿ ವರದಿ ಮಾಡಿ.



Source link

Leave a Reply

Your email address will not be published. Required fields are marked *