Headlines

ಇಂಟರ್ನೆಟ್ ಇಲ್ಲದೆಯೂ ವರ್ಕ್ ಆಗುತ್ತೆ ವ್ಯಾಟ್ಸಾಪ್ ಪ್ರತಿಸ್ಪರ್ಧಿ ಬಿಟ್‌ಚಾಟ್, ಮೆಟಾಗೆ ತಲೆನೋವು

ಇಂಟರ್ನೆಟ್ ಇಲ್ಲದೆಯೂ ವರ್ಕ್ ಆಗುತ್ತೆ ವ್ಯಾಟ್ಸಾಪ್ ಪ್ರತಿಸ್ಪರ್ಧಿ ಬಿಟ್‌ಚಾಟ್, ಮೆಟಾಗೆ ತಲೆನೋವು

ಟ್ವಿಟರ್ ಸಹ ಸಂಸ್ಥಾಪಕ ಜ್ಯಾಕ್ ಡೋರ್ಸಿ, ಇಂಟರ್ನೆಟ್ ಇಲ್ಲದೆ ಬ್ಲೂಟೂತ್ ಮೂಲಕ ಮೆಸೇಜ್ ಕಳಿಸುವ BitChat ಆ್ಯಪ್‌ ಪರಿಚಯಿಸಿದ್ದಾರೆ. ಚೈನ್ ಕಮ್ಯುನಿಕೇಷನ್ ತಂತ್ರಜ್ಞಾನದ ಮೂಲಕ, ಹಲವು ಸಾಧನಗಳ ಮೂಲಕ ಮೆಸೇಜ್‌ಗಳು ಬಳಕೆದಾರರನ್ನು ತಲುಪುತ್ತವೆ. ಏನಿದು ಹೊಸ ಬಿಟ್‌ಚಾಟ್ ಆ್ಯಪ್

ಮೆಸೇಂಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವ್ಯಾಟ್ಸಾಪ್ ಬಹುತೇಕರ ಮೊದಲ ಆಯ್ಕೆ. ಜೊತೆಗೆ ಅತೀ ಹೆಚ್ಚಿನ ಜನರು ಬಳಸುತ್ತಿದ್ದಾರೆ. ಮೆಟಾ ಮಾಲೀಕತ್ವದ ವ್ಯಾಟ್ಸಾಪ್‌ಗೆ ಟ್ವಿಟರ್ ಸಹ ಸಂಸ್ಥಾಪಕ ಭಾರಿ ಹೊಡೆತ ನೀಡಿದ್ದಾರೆ. ಜ್ಯಾಕ್ ಡೋರ್ಸಿ ಹೊಚ್ಚ ಹೊಸ ಬಿಟ್‌ಚಾಟ್ ಆ್ಯಪ್ ಹೊರತಂದಿದ್ದಾರೆ.  ಇದು ಮೆಟಾ ಮಾಲೀಕ ಮಾರ್ಕ್ ಜುಕರ್‌ಬರ್ಗ್ ನಿದ್ದೆಗೆಡಿಸಿದೆ. ಕಾರಣ ಬಿಟ್‌ಚಾಟ್ ಇಂಟರ್ನೆಟ್ ಇಲ್ಲದೆಯೂ ವರ್ಕ್ ಆಗಲಿದೆ.

ಟ್ವಿಟರ್ ಸ್ಥಾಪಕ ಜ್ಯಾಕ್ ಡೋರ್ಸಿ, ಹೊಸ ಆ್ಯಪ್ BitChat ಮೂಲಕ ಇಂಟರ್ನೆಟ್ ಇಲ್ಲದೆ ಬ್ಲೂಟೂತ್‌ನಿಂದ ಮೆಸೇಜ್ ಕಳಿಸುವ ಸೌಲಭ್ಯ ನೀಡಿದ್ದಾರೆ. BitChat, ಮೆಶ್ ನೆಟ್‌ವರ್ಕಿಂಗ್ ತಂತ್ರಜ್ಞಾನ ಬಳಸುತ್ತದೆ. ಇದರಲ್ಲಿ ಹಲವು ಸಾಧನಗಳು ಸರಪಣಿಯಂತೆ ಸಂಪರ್ಕಗೊಂಡು ಮೆಸೇಜ್‌ಗಳನ್ನು ತಲುಪಿಸುತ್ತವೆ.

ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಗಳು

ಇಂಟರ್ನೆಟ್ ಇಲ್ಲದ ಗ್ರಾಮೀಣ ಪ್ರದೇಶಗಳು

ಕಡಿಮೆ ವೆಚ್ಚದಲ್ಲಿ ಸಂವಹನ ಅಗತ್ಯವಿರುವ ಸ್ಥಳಗಳು

ಇಂಟರ್ನೆಟ್ ಅಗತ್ಯವಿಲ್ಲ – ಬ್ಲೂಟೂತ್ ಸಾಕು

ಕಡಿಮೆ ಬ್ಯಾಟರಿ ಬಳಕೆ

ಡೇಟಾ ಸುರಕ್ಷತೆ ಮತ್ತು ಎನ್‌ಕ್ರಿಪ್ಶನ್

ಒಂದೇ ಬಾರಿಗೆ ಹಲವು ಬಳಕೆದಾರರಿಗೆ ಮಾಹಿತಿ ಕಳುಹಿಸುವ ಸಾಮರ್ಥ್ಯ

ಸಮುದಾಯ ಚಾಟ್‌ಗಳನ್ನು ರಚಿಸುವ ಸೌಲಭ್ಯ

ಜ್ಯಾಕ್ ಡೋರ್ಸಿ BitChat ಬಿಡುಗಡೆ ಮಾಡುವಾಗ, “ಇಂಟರ್ನೆಟ್ ಸೇವೆಗಳ ಮೇಲಿನ ಖಾಸಗಿ ಕಂಪನಿಗಳ ಹಿಡಿತವನ್ನು ಮುರಿದು ಜನರಿಗೆ ನೇರ ಸಂವಹನ ಸ್ವಾತಂತ್ರ್ಯ ನೀಡಲು ಇದನ್ನು ರಚಿಸಿದ್ದೇನೆ” ಎಂದಿದ್ದಾರೆ. ಈ ಆ್ಯಪ್ Android ಮತ್ತು iOS ಸ್ಟೋರ್‌ಗಳಲ್ಲಿ ಲಭ್ಯವಿದೆ. ಆರಂಭದಲ್ಲಿ ಉಚಿತವಾಗಿದ್ದರೂ, ಭವಿಷ್ಯದಲ್ಲಿ ಸಣ್ಣ ಶುಲ್ಕ ವಿಧಿಸಬಹುದು. BitChat, ಸಂವಹನ ಕ್ರಾಂತಿಯನ್ನೇ ಮಾಡಬಲ್ಲದು. ಇಂಟರ್ನೆಟ್ ಇಲ್ಲದಿದ್ದರೂ, ಮಾಹಿತಿ ಹಂಚಿಕೊಳ್ಳಬಹುದು!

Source link

Leave a Reply

Your email address will not be published. Required fields are marked *