ಸುಮ್ನೆ ಕೂತಿರೋ ನಾಯಿಗಳು ಬೈಕ್‌, ಕಾರು ನೋಡಿದ್ಮೇಲೆ ಯಾಕೆ ಬೊಗಳ್ತಾ ಓಡ್ತವೆ?

ಸುಮ್ನೆ ಕೂತಿರೋ ನಾಯಿಗಳು  ಬೈಕ್‌, ಕಾರು ನೋಡಿದ್ಮೇಲೆ ಯಾಕೆ ಬೊಗಳ್ತಾ ಓಡ್ತವೆ?



ಸುಮ್ನೆ ಕೂತಿರೋ ನಾಯಿಗಳು  ಬೈಕ್‌, ಕಾರು ನೋಡಿದ್ಮೇಲೆ ಯಾಕೆ ಬೊಗಳ್ತಾ ಓಡ್ತವೆ?

ನಾಯಿಗಳಿಗೆ ಮನುಷ್ಯರಿಗಿಂತ ವಾಸನೆ ಗ್ರಹಿಸುವ ಶಕ್ತಿ ತುಂಬಾ ಜಾಸ್ತಿ. ಅವು ದೂರದಿಂದಲೇ ವಾಸನೆ ಪತ್ತೆ ಹಚ್ಚಬಲ್ಲವು. ನಿಮ್ಮ ಕಾರುಗಳು ಅಥವಾ ಬೈಕ್‌ಗಳು, ಸೈಕಲ್‌ಗಳು ಬೇರೆ ಪ್ರದೇಶದಿಂದ ನಾಯಿಗಳು ಇರುವ ಪ್ರದೇಶಕ್ಕೆ ಬರುತ್ತವೆ. ಆಗ ನಾಯಿಗಳಿಗೆ ಆ ಕಾರು ಬೇರೆ ಪ್ರದೇಶದಿಂದ ಬಂದಿದೆ ಅನ್ನೋದು ಟೈರ್‌ಗಳಿಂದ ಬರುವ ವಾಸನೆಯಿಂದ ಗೊತ್ತಾಗುತ್ತೆ. ಅಲ್ಲಿ ವಾಸಿಸುವ ನಾಯಿಗಳಿಗೆ ಆ ಪ್ರದೇಶದ ವಾಸನೆ ಅಭ್ಯಾಸ ಆಗಿರುತ್ತೆ.

ಯಾವಾಗ ಬೇರೆ ಪ್ರದೇಶದಿಂದ ಕಾರು ಅಥವಾ ಬೈಕ್ ಬರುತ್ತೋ, ಅದರ ವಾಸನೆ ಬೇರೆ ಇರುತ್ತೆ. ಆ ವಾಸನೆಯನ್ನು ನಾಯಿಗಳು ಗ್ರಹಿಸಿ ಎಚ್ಚರಿಕೆಯಂತೆ ಬೊಗಳಲು ಪ್ರಾರಂಭಿಸುತ್ತವೆ. ನಿಜವಾಗ್ಲೂ ನಾಯಿಗಳು ಇರುವ ಪ್ರದೇಶಗಳಲ್ಲಿ ಕಾವಲು ಕಾಯುತ್ತವೆ. ತಮ್ಮ ಗಡಿಯನ್ನು ತಾವೇ ನಿರ್ಧರಿಸಿಕೊಳ್ಳುತ್ತವೆ. ಆ ಗಡಿ ಒಳಗೆ ಯಾವುದೇ ಹೊಸ ಬೈಕ್‌ಗಳು, ಕಾರುಗಳು ಬಂದರೆ ತಕ್ಷಣ ಬೊಗಳಲು ಪ್ರಾರಂಭಿಸುತ್ತವೆ.



Source link

Leave a Reply

Your email address will not be published. Required fields are marked *