ವಿಲ್ ಜ್ಯಾಕ್ಸ್ ಸಿಡಿಲಬ್ಬರಕ್ಕೆ ತತ್ತರಿಸಿದ ಲಂಡನ್ ಸ್ಪಿರಿಟ್

ವಿಲ್ ಜ್ಯಾಕ್ಸ್ ಸಿಡಿಲಬ್ಬರಕ್ಕೆ ತತ್ತರಿಸಿದ ಲಂಡನ್ ಸ್ಪಿರಿಟ್


ವಿಲ್ ಜ್ಯಾಕ್ಸ್ ಸಿಡಿಲಬ್ಬರಕ್ಕೆ ತತ್ತರಿಸಿದ ಲಂಡನ್ ಸ್ಪಿರಿಟ್

ಇಂಗ್ಲೆಂಡ್ನಲ್ಲಿ ದಿ ಹಂಡ್ರೆಡ್ ಲೀಗ್‌ನ 29 ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ಭರ್ಜರಿ ಜಯ ಸಾಧಿಸಿದೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಓವಲ್ ಇನ್ವಿನ್ಸಿಬಲ್ಸ್ ತಂಡವು ಲಂಡನ್ ಸ್ಪಿರಿಟ್ಬ್ಯಾಟಿಂಗ್ ಗೆ ಆಹ್ವಾನಿಸಿದ್ದರು.

ಅದರಂತೆ ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ಪರ ಜೇಮಿ ಸ್ಮಿತ್ 28 ಗಳಿಸಿದರೆ, ಜೇಮಿ ಓವರ್ಟನ್ 31 ಬಾರಿಸಿದರು. ಮೂಲಕ ಲಂಡನ್‌ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 7 ವಿಕೆಟ್ ಕಳೆದುಕೊಂಡು 152 ಕಲೆಹಾಕಿತು.

153 ಗುರಿ ಬೆನ್ನತ್ತಿದ ಓವಲ್ ಇನ್ವಿನ್ಸಿಬಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವಿಲ್ ಜ್ಯಾಕ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್‌ನಿಂದಲೇ ಬಿರುಸಿನ ಬ್ಯಾಟಿಂಗ್ಒತ್ತು ನೀಡಿದ ಜ್ಯಾಕ್ಸ್ 27 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 45 ಬಾರಿಸಿದರು.

ಬಳಿಕ ಬಂದ ಜೋರ್ಡನ್ ಕಾಕ್ಸ್ 27 ಎಸೆತಗಳಲ್ಲಿ 5 ಫೋರ್ ಹಾಗೂ 2 ಸಿಕ್ಸ್ ನೊಂದಿಗೆ 47 ಚಚ್ಚಿದರು. ಈ ಮ‌ೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡವು 78 ಎಸೆತಗಳಲ್ಲಿ 153 ರನ್ 6 ವಿಕೆಟ್ ಗಳ ಭರ್ಜರಿ ಸಾಧಿಸಿದೆ.

 



Source link

Leave a Reply

Your email address will not be published. Required fields are marked *