ರಾಮಾಯಣ, ಟಾಕ್ಸಿಕ್‌ ಶೂಟಿಂಗ್‌ ಮುಗಿಸಿ ಅಮೆರಿಕಾ ಹೋದ ಯಶ್‌: ಕಾರಣವೇನು?

ರಾಮಾಯಣ, ಟಾಕ್ಸಿಕ್‌ ಶೂಟಿಂಗ್‌ ಮುಗಿಸಿ ಅಮೆರಿಕಾ ಹೋದ ಯಶ್‌: ಕಾರಣವೇನು?

ಯಶ್‌ ನಟಿಸುತ್ತಿರುವ ‘ಟಾಕ್ಸಿಕ್‌’ ಚಿತ್ರದ ಚಿತ್ರೀಕರಣ ಮುಗಿದಿದೆ. ಜೊತೆಗೆ ಅವರು ರಾವಣನ ಪಾತ್ರದಲ್ಲಿ ನಟಿಸಿ, ನಿರ್ಮಿಸುತ್ತಿರುವ ‘ರಾಮಾಯಣ’ ಭಾಗ 1 ಚಿತ್ರೀಕರಣವೂ ಮುಗಿದಿದೆ.

ಯಶ್‌ ಅಭಿಮಾನಿಗಳಿಗೆ ಸಂತೋಷದ ಸುದ್ದಿ ಬಂದಿದೆ. ಅವರು ನಾಯಕನಾಗಿ ನಟಿಸುತ್ತಿರುವ ‘ಟಾಕ್ಸಿಕ್‌’ ಚಿತ್ರದ ಚಿತ್ರೀಕರಣ ಮುಗಿದಿದೆ. ಜೊತೆಗೆ ಅವರು ರಾವಣನ ಪಾತ್ರದಲ್ಲಿ ನಟಿಸಿ, ನಿರ್ಮಿಸುತ್ತಿರುವ ‘ರಾಮಾಯಣ’ ಭಾಗ 1 ಚಿತ್ರೀಕರಣವೂ ಮುಗಿದಿದೆ.

ಇದೇ ಖುಷಿಯಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಯಶ್‌ ಅಮೆರಿಕಾ ತೆರಳಿದ್ದಾರೆ. ಈಗಾಗಲೇ ರಾಧಿಕಾ ಪಂಡಿತ್‌ ಹಾಗೂ ಮಕ್ಕಳು ಅಮೆರಿಕಾ ತಲುಪಿದ್ದಾರೆ. ಸಿನಿಮಾ ಕೆಲಸ ಮುಗಿಸಿಕೊಂಡು ಮುಂಬೈನಲ್ಲಿ ವಿಮಾನ ಏರಿರುವ ಯಶ್‌ ಅಮೆರಿಕಾದಲ್ಲಿ ಕುಟುಂಬದವರನ್ನು ಸೇರಿಕೊಂಡಿದ್ದಾರೆ.

ರಾಮಾಯಣ ಸಿನಿಮಾ ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ರಾಮಾಯಣದ ಫಸ್ಟ್ ಗ್ಲಿಂಪ್ಸ್‌ ನಾಳೆ ಜು.3ರಂದು ರಿಲೀಸ್‌ ಆಗುತ್ತಿದೆ.

ದಂಗಲ್ ಖ್ಯಾತಿಯ ನಿತೇಶ್ ತಿವಾರಿ ಅವರು ರಾಮಾಯಣ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. 2 ಪಾರ್ಟ್​ನಲ್ಲಿ ಸಿನಿಮಾ ಮೂಡಿಬರಲಿದೆ. ಮೊದಲ ಪಾರ್ಟ್​ಗೆ ಚಿತ್ರೀಕರಣ ಮುಕ್ತಾಯ ಆಗಿದೆ.

ಈ ಚಿತ್ರದಲ್ಲಿ ರಣ್‌ಬೀರ್‌ ಕಪೂರ್‌ ರಾಮನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ. ನಿತೇಶ್‌ ತಿವಾರಿ ನಿರ್ದೇಶನದ, ನಮಿತ್‌ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ ಭಾಗ 1’ 2026ರ ದೀಪಾವಳಿಯಂದು ರಿಲೀಸ್ ಆಗಲಿದೆ.

Source link

Leave a Reply

Your email address will not be published. Required fields are marked *