ಪ್ರತಿದಿನ 2 ಗಂಟೆ ಅಳುತ್ತಿದ್ದೆ. ಒಂದು ಹಂತದಲ್ಲಿ ಆ ಕೆಟ್ಟ ಯೋಚನೆ ಮಾಡಿದ್ದೆ! ಡಿವೋರ್ಸ್ ಬೆನ್ನಲ್ಲೇ ಮೌನ ಮುರಿದ ಚಹಲ್

ಪ್ರತಿದಿನ 2 ಗಂಟೆ ಅಳುತ್ತಿದ್ದೆ. ಒಂದು ಹಂತದಲ್ಲಿ ಆ ಕೆಟ್ಟ ಯೋಚನೆ ಮಾಡಿದ್ದೆ! ಡಿವೋರ್ಸ್ ಬೆನ್ನಲ್ಲೇ ಮೌನ ಮುರಿದ ಚಹಲ್

ಪ್ರತಿದಿನ 2 ಗಂಟೆ ಅಳುತ್ತಿದ್ದೆ. ಒಂದು ಹಂತದಲ್ಲಿ ಆ ಕೆಟ್ಟ ಯೋಚನೆ ಮಾಡಿದ್ದೆ! ಡಿವೋರ್ಸ್ ಬೆನ್ನಲ್ಲೇ ಮೌನ ಮುರಿದ ಚಹಲ್

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ತಾವೆದುರಿಸಿದ ಕ್ಲಿಷ್ಟಕರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಇದಷ್ಟೇ ಅಲ್ಲದೇ ಒಂದು ಹಂತದಲ್ಲಿ ತಾವು ಕೆಟ್ಟ ಯೋಚನೆಯೊಂದನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಭಾರತದ ತಾರಾ ಕ್ರಿಕೆಟಿಗ ಯಜುವೇಂದ್ರ ಚಹಲ್‌ ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಜೊತೆಗಿನ ವಿಚ್ಛೇದನದ ಬಗ್ಗೆ ಮೊದಲ ಬಾರಿ ಮುಕ್ತವಾಗಿ ಮಾತನಾಡಿದ್ದಾರೆ. ನನಗೆ ಜೀವನವೇ ಸಾಕೆನಿಸಿತ್ತು. ಆ*ತ್ಮಹ*ತ್ಯೆ ಬಗ್ಗೆ ಯೋಚಿಸಿದ್ದೆ ಎಂದಿದ್ದಾರೆ.

ಈ ಬಗ್ಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ಅವರು, ‘ದಾಂಪತ್ಯದಲ್ಲಿ ಇಬ್ಬರೂ ಬ್ಯುಸಿಯಾದಾಗ ಸಮಸ್ಯೆಯಾಗುತ್ತದೆ. ನಮ್ಮ ದಾಂಪತ್ಯದಲ್ಲಿ ಬಿರುಕು ಬಿಟ್ಟಾಗ ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳಲಿಲ್ಲ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ನಟಿಸಬೇಕಾಯಿತು.

ವಿಚ್ಛೇದನ ಪಡೆದಾಗ ಜನರು ನನ್ನನ್ನು ಮೋಸಗಾರ ಎಂದರು. ಆದರೆ ನಾನು ಮೋಸ ಮಾಡಲಿಲ್ಲ. ನನ್ನ ಪ್ರೀತಿಪಾತ್ರರಿಗೆ ನಾನು ತುಂಬಾ ನಿಷ್ಠಾವಂತನಾಗಿದ್ದೆ’ ಎಂದಿದ್ದಾರೆ.

ನಾವು ಯಾವುದಾದರೂ ಹುಡುಗಿಯೊಂದಿಗೆ ಕಾಣಿಸಿಕೊಂಡರೆ ಅದಕ್ಕೆ ಸಂಬಂಧ ಕಲ್ಪಿಸಿಬಿಡುತ್ತಾರೆ. ನನಗೂ ಇಬ್ಬರು ಸಹೋದರಿಯರಿದ್ದಾರೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕೆನ್ನುವುದು ನನಗೆ ಗೊತ್ತಿದೆ ಎಂದು ಚಹಲ್ ಹೇಳಿದ್ದಾರೆ.

ವಿಚ್ಛೇದನ ಸಮಯ ಬಹಳ ಕಷ್ಟವಾಗಿತ್ತು. ಪ್ರತಿದಿನ 2 ಗಂಟೆ ಅಳುವುದು, 2-3 ಗಂಟೆ ನಿದ್ರೆ. ಹೀಗಿರುವುದಕ್ಕಿಂತ ಸಾಯುವುದೇ ಮೇಲು ಎಂದು ಅನಿಸಿತ್ತು’ ಎಂದಿದ್ದಾರೆ.

ನಾನು ಒಂದು ಹಂತದಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಲು ತೀರ್ಮಾನಿಸಿದ್ದೆ. ನನ್ನ ಈ ಮಾನಸಿಕ ಕಿರಿಕಿರಿಯಿಂದಾಗಿ ಕ್ರಿಕೆಟ್‌ನತ್ತ ಗಮನ ಕೇಂದ್ರಿಕರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಚಹಲ್ ಹೇಳಿದ್ದಾರೆ.

2020ರ ಡಿಸೆಂಬರ್‌ನಲ್ಲಿ ಇಬ್ಬರ ವಿವಾಹವಾಗಿತ್ತು. ಆದರೆ 2022ರಿಂದಲೇ ಪ್ರತ್ಯೇಕವಾಗಿ ಬದುಕುತ್ತಿದ್ದರು. ಇತ್ತೀಚೆಗೆ ವಿಚ್ಛೇದನ ಪಡೆದುಕೊಂಡಿದ್ದರು.

Source link

Leave a Reply

Your email address will not be published. Required fields are marked *