ಚಾಮರಾಜನಗರ: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಮೀನು ವಶಕ್ಕೆ ಪಡೆದಿದ್ದಕ್ಕೆ ಮನನೊಂದು ಬಡ ಮಹಿಳೆ ನೇಣಿಗೆ ಶರಣು! | Poor Woman Lost Her Life In Chamarajanagar Over Land Dispute For Ambedkar Bhavan
ಚಾಮರಾಜನಗರ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಂಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮ೧ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಾಮರಾಜನಗರ (ಆ.16): ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಕ್ಕೆ ಜಮೀನು ವಶಕ್ಕೆ ಪಡೆದಿದ್ದಕ್ಕೆ ಮನನೊಂದು ಮಹಿಳೆಯೋರ್ವಳು ನೇಣುಬಿಗಿದುಕೊಂಡು ಸಾವನ್ನಪ್ಪಿದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದೊಡ್ಡ ಆಲತ್ತೂರಿನಲ್ಲಿ ನಡೆದಿದೆ. 52 ವರ್ಷದ ರಾಜಮ್ಮ ಮೃತ ಮಹಿಳೆ. ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ ಭೂಮಿ ಬಂದಿತ್ತು. ಇದ್ದ ಚೂರುಪಾರು ಭೂಮಿಯಲ್ಲಿ ಕುಟುಂಬ ವ್ಯವಸಾಯ ಮಾಡಿ ಜೀವನ ನಡೆಸುತ್ತಿದರು. ಕಳೆದವಾರ ಇದ್ದಕ್ಕಿದ್ದ…