ಡೆಂಟಿಸ್ಟ್ ತುಂಬಾ ಕಾಸ್ಟ್ಲಿ: ಗೆಳೆಯನ ಹಲ್ಲಿನ ಓರೆಕೋರೆ ಸರಿಪಡಿಸಲು ಟೈಲ್ಸ್ ಪಾಲಿಶಿಂಗ್ ಮೆಷಿನ್ ಬಳಸಿದ ಸ್ನೇಹಿತ | Friendship Test Viral Video Man Uses Tile Polisher To Fix Friends Teeth
ಟೈಲ್ಸ್ ಪಾಲಿಶ್ ಮಾಡುವ ಯಂತ್ರ ಬಳಸಿ ಗೆಳೆಯನ ಹಲ್ಲನ್ನು ನೇರವಾಗಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದಿನ ದಿನಗಳಲ್ಲಿ ಹಲ್ಲಿನ ಚಿಕಿತ್ಸೆ ಬಹಳ ದುಬಾರಿ. ಹೊರರೋಗಿಗಳಾಗಿ ಈ ಚಿಕಿತ್ಸೆಗೆ ದಾಖಲಾಗಿರವುದರಿಂದ ಯಾವುದೇ ಆರೋಗ್ಯ ವಿಮೆಯ ಕೆಳಗೆ ಹಲ್ಲಿನ ಚಿಕಿತ್ಸೆ ಬರುವುದಿಲ್ಲ. ಹೀಗಾಗಿ ಹಲ್ಲಿನ ಸಮಸ್ಯೆ ಎದುರಿಸುವವರು ದುಬಾರಿ ವೆಚ್ಚ ಮಾಡಬೇಕಾಗುತ್ತದೆ. ಒಂದು ಹುಳುಕು ಹಲ್ಲಿಗೆ ಫಿಲ್ಲಿಂಗ್ ಮಾಡಿ ರೂಟ್ ಕೆನಾಲ್ ಮಾಡಿಸಿ ಕ್ಯಾಪ್ ಹಾಕುವುದಕ್ಕೆ ಮಹಾನಗರಿಗಳಲ್ಲಿ ಕನಿಷ್ಟ 7-8 ಸಾವಿರದಿಂದ ದರ ನಿಗದಿ ಮಾಡುತ್ತಾರೆ. ಇನ್ನು…