ಬೆಂಗಳೂರು ಚಿತ್ರೋತ್ಸವದ ಕೊನೆಯ ದಿನ ಈ 10 ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ

ಬೆಂಗಳೂರು ಚಿತ್ರೋತ್ಸವದ ಕೊನೆಯ ದಿನ ಈ 10 ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ


ಜನವರಿ 29 ರಿಂದ ಫೆಬ್ರವರಿ 6 ರ ತನಕ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬೆಂಗಳೂರು ಚಲನಚಿತ್ರೋತ್ಸವ) ನಡೆದಿದೆ. ಫೆಬ್ರವರಿ 6 ರಂದು ಸಮಾರೋಪ ಸಮಾರಂಭ. ಕನ್ನಡ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ನಟಿ, ನಿರ್ಮಾಪಕಿ ಜಯಮಾಲ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಪಾರ್ವತಮ್ಮ ಪರವಾಗಿ ಅವರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್, ಎಸ್. ರಾಮಚಂದ್ರ ಪರವಾಗಿ ಅವರ ಪುತ್ರಿ ಉಷಾ ಗೌರವ ಸ್ವೀಕರಿಸಲಿದ್ದಾರೆ. ಫೆ.6ರಂದು ಲುಲು ಮಾಲ್‌ನಲ್ಲಿ ನೋಡಬಹುದಾದ 10 ಅತ್ಯುತ್ತಮ ಸಿನಿಮಾಗಳು.

  1. ನೌವೆಲ್ ವಾಗ್ : ರಾತ್ರಿ 8:20 ಪರದೆಯ 3, ರಾತ್ರಿ 7:30 6, ಸಂಜೆ 7:20 ಪರದೆಯ 8. ಪ್ರಖ್ಯಾತ ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ ಈ 2025 ರ ಚಿತ್ರವು ಫ್ರೆಂಚ್ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.
  2. ಶಂಕರ್ ಗುರು: ಮಧ್ಯಾಹ್ನ 2:00 ಪರದೆ 6. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಈ 1978ರ ಮೈಲಿಗಲ್ಲು ಚಿತ್ರ ‘ಜನಪ್ರಿಯ ಮನರಂಜನಾ ಸಿನಿಮಾ’ದಲ್ಲಿ ಪ್ರದರ್ಶಿಸಲಾಗುತ್ತಿದೆ.
  3. ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್
  4. ದಿ ಪ್ರೆಸಿಡೆಂಟ್ಸ್ ಕೇಕ್: ಸಂಜೆ 5:40, ಪರದೆ 4. ಹಸನ್ ಹಾದಿ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಇರಾಕ್‌ನ ಸಮಕಾಲೀನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತದೆ.
  5. ಮ್ಯಾನ್ ಆಫ್ ಮಾರ್ಬಲ್: ಸಂಜೆ 6:50, ವಿಐಪಿ ಪರದೆ 1. ಪೋಲಿಷ್ ನಿರ್ದೇಶಕ ಆಂಡ್ರ್ಜ್ ವಾಜ್ದಾ ಅವರ ಈ 1977 ರ ಚಿತ್ರವು ವಿಶ್ವ ಸಿನಿಮಾದ ಐತಿಹಾಸಿಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
  6. ಡಿವೈನ್ ಕಾಮಿಡಿ: ಮಧ್ಯಾಹ್ನ 12:30, ಪರದೆ 5. ಅಲಿ ಅಸ್ಗರಿ ನಿರ್ದೇಶನದ ಈ 2025ರ ಪರ್ಷಿಯನ್ ಚಿತ್ರವು ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದ ಅಡಿಯಲ್ಲಿ ನಡೆಯುತ್ತಿದೆ.
  7. ದಿ ಮಾಸ್ಟರ್ ಮೈಂಡ್: ಮಧ್ಯಾಹ್ನ 2:30, ಪರದೆ 5. ಕೆ ರೀಚಾರ್ಡ್ ನಿರ್ದೇಶನದ ಈ ಇಂಗ್ಲಿಷ್ ಚಿತ್ರವು ತನ್ನ ವಿಶಿಷ್ಟ ಕಥಾಹಂದರದಿಂದಾಗಿ ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಗಮನಸೆಳೆಯುತ್ತಿದೆ.
  8. ಡ್ರಾಗನ್‌ಫ್ಲೈ: ಬೆಳಗ್ಗೆ 11:30, ಪರದೆ 3. ಪಾಲ್ ಆಂಡ್ರ್ಯೂ ವಿಲಿಯಮ್ಸ್ ನಿರ್ದೇಶನದ ಈ 2025 ರ ಇಂಗ್ಲಿಷ್ ಚಿತ್ರವು ಗಂಭೀರ ಕಥಾಹಂದರ ಹೊಂದಿರುವ ಪ್ರಮುಖ ಚಿತ್ರವಾಗಿದೆ.
  9. ಗಣರಾಜ್: ಮಧ್ಯಾಹ್ನ 3:00. ವಿಐಪಿ ಪರದೆ 2. ಭಾರತದ ಈಶಾನ್ಯ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಈ 2025ರ ಅಸ್ಸಾಮಿ ಚಿತ್ರವನ್ನು ದಿಪ್ ಭುಯಾನ್ ನಿರ್ದೇಶಿಸಿದ್ದಾರೆ.
  10. ಕ್ಯಾಟನೇ: ಸಂಜೆ 4:50, ಪರದೆ 1. ಅಯೋನಾ ಮಿಸ್ಚೀ ನಿರ್ದೇಶನದ ಈ 2025 ರ ರೊಮೇನಿಯನ್ ಚಿತ್ರವು ಚಲನಚಿತ್ರದ ಆಧುನಿಕ ಶೈಲಿಯನ್ನು ಪ್ರತಿನಿಧಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *