ಈ ಸೇಬಿಗೆ 10 ಕೋಟಿ ರೂ. ಆದ್ರೆ ಇದನ್ನು ತಿನ್ನಲು ಸಾಧ್ಯವಿಲ್ಲ

ಈ ಸೇಬಿಗೆ 10 ಕೋಟಿ ರೂ. ಆದ್ರೆ ಇದನ್ನು ತಿನ್ನಲು ಸಾಧ್ಯವಿಲ್ಲ


ಸೇಬು ಬೆಲೆ (ಗೋಲ್ಡ್ ಡೈಮಂಡ್ ಆಪಲ್) ಗಗನಕ್ಕೇರುತ್ತಿದೆ, ಸಾಮಾನ್ಯ ಸೇಬು ಬೆಲೆ ಕೆಜಿಗೆ 100 ರಿಂದ 200 ರೂ.ವರೆಗೆ ಇದೆ. ಈ ಕಾರಣಕ್ಕೆ ಗ್ರಾಹಕರು ಸೇಬು ಖರೀದಿಸಲು ಹಿಂದು – ಮುಂದೆ ನೋಡುತ್ತಿದ್ದಾರೆ. ಇದರ ಮಧ್ಯೆ ಇಲ್ಲೊಂದು ಸೇಬುಗೆ ಕೋಟಿ ಬೆಲೆ ಬಂದಿದೆ. ಈ ಒಂದು ಸೇಬುಗೆ 10 ಕೋಟಿ ರೂ.ಅಂತೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸೇಬು ನೋಡಿ ಅಚ್ಚರಿ ಮೂಡಿಸಿದ್ದಾರೆ. ಒಂದು ಸೇಬು ಇಷ್ಟೊಂದು ದುಬಾರಿ ಎಂದು ಯೋಚನೆ ಮಾಡಬೇಡಿ. ಇದು ಚಿನ್ನ ಮತ್ತು ವಜ್ರಗಳಿಂದ ತಯಾರಿಸಲ್ಪಟ್ಟ ಆಪಲ್. ಇದನ್ನು ಮುಂಬೈನ ಪ್ರಸಿದ್ಧ ಗೋಲ್ಡ್ ಮ್ಯಾನ್ ಎಂದು ಕರೆಯಲಾಗುತ್ತದೆ ರೋಹಿತ್ ಪಿಸಲ್ ಎಂಬುವವರು. ಇದೀಗ ಈ ಸೇಬು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

18 ಕ್ಯಾರೆಟ್ ಚಿನ್ನ ಮತ್ತು 9 ಕ್ಯಾರೆಟ್, 36 ಕ್ಯಾರೆಟ್ ವಜ್ರಗಳಿಂದ ತಯಾರಿಸಲ್ಪಟ್ಟ ಸೇಬು ಇದು. ಇದನ್ನು ಹೊರತುಪಡಿಸಿ 1,396 ಸಣ್ಣ ವಜ್ರದ ತುಂಡುಗಳನ್ನು ಕೂಡ ಬಳಸಲಾಗಿದೆ. ಹಾಗೂ ತುಂಬಾ ಎಚ್ಚರಿಕೆಯಿಂದ ಜೋಡಿಸಲಾಗಿದೆ. ಇದು ಸುಮಾರು 29.8 ಗ್ರಾಂ ತೂಕವಿದೆ. ಈ ಸೇಬುಗೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಈ ಆಪಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಜೊತೆಗೆ ವರ್ಲ್ಡ್ ಇಂಟರ್ನ್ಯಾಷನಲ್ ಜೆಮಾಲಜಿಕಲ್ ಇನ್‌ಸ್ಟಿಟ್ಯೂಟ್ ಪ್ರಮಾಣೀಕರಿಸಲಾಗಿದೆ. ಇದರ ಸತ್ಯಾಸತ್ಯತೆ ಮತ್ತು ಮೌಲ್ಯವನ್ನು ಪರಿಶೀಲಿಸಲಾಗಿದೆ. ಇದು ಭಾರತೀಯ ಆಭರಣ ಕಲೆ ಮತ್ತು ನಾವೀನ್ಯತೆಗೆ ಹೆಮ್ಮೆಯ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ರಜೆ ನೀಡಿದ ಕಂಪನಿ

ಈ ಸೇಬು ಥೈಲ್ಯಾಂಡ್ನ ರಾಜಮನೆತನದ ಕೈ ಸೇರಿದ್ದು, ಥೈಲ್ಯಾಂಡ್ನ ರಾಯಲ್ ಪ್ಯಾಲೇಸ್ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಈ ಸೇಬುಗೆ ದಿನದಿಂದ ದಿನಕ್ಕೆ ಬೆಲೆ ಹೆಚ್ಚುತ್ತಲೇ ಇದೆ. ಭಾರತೀಯ ಕಲಾತ್ಮಕತೆ ಮತ್ತು ಜಾಗತಿಕ ಐಷಾರಾಮಿ ಕರಕುಶಲತೆಯ ಸಂಕೇತವಾಗಿ ನಿಂತಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಇದರ ಬಗ್ಗೆ ರೋಹಿತ್ಸಲ್ ಪಿ ಕೂಡ ಮಾತನಾಡುತ್ತಾರೆ, ” ಇದು ಕೇವಲ ಆಭರಣ ಅಲ್ಲ, ಭಾರತೀಯರ ಕಲೆ ಮತ್ತು ಹೆಮ್ಮೆಯ ಪ್ರದರ್ಶನವನ್ನು ಪ್ರಪಂಚದಾದ್ಯಂತ ಮಾಡಲು ಇದನ್ನು ತಯಾರಿಸಲಾಗಿದೆ” ಎಂದು ಹೇಳಿದರು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:36 pm, ಮಂಗಳವಾರ, 18 ನವೆಂಬರ್ 25



Source link

Leave a Reply

Your email address will not be published. Required fields are marked *