Headlines

ಮೈಸೂರು ಅರಮನೆ ತ್ರಿನೇಶ್ವರನಿಗೆ ಬರೋಬ್ಬರಿ 11 ಕೆಜಿ ತೂಕದ ಚಿನ್ನದ ಮುಖವಾಡ ಹಸ್ತಾಂತರ: ಏನಿದರ ವಿಶೇಷ? ಹೇಗಿದೆ ನೋಡಿ!

ಮೈಸೂರು ಅರಮನೆ ತ್ರಿನೇಶ್ವರನಿಗೆ ಬರೋಬ್ಬರಿ 11 ಕೆಜಿ ತೂಕದ ಚಿನ್ನದ ಮುಖವಾಡ ಹಸ್ತಾಂತರ: ಏನಿದರ ವಿಶೇಷ? ಹೇಗಿದೆ ನೋಡಿ!


ಮೈಸೂರು, ಫೆಬ್ರವರಿ 14: ಮಹಾಶಿವರಾತ್ರಿ ಹಬ್ಬದ ಸಡಗರದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶೇಷ ಆಚರಣೆಗೆ ಸಿದ್ಧತೆಗಳು ನಡೆದಿವೆ. ಮೈಸೂರು ಅರಮನೆ ಆವರಣದಲ್ಲಿರುವ ಅಪರೂಪದ ತ್ರಿನೇಶ್ವರಸ್ವಾಮಿ ಶಿವರಾತ್ರಿ ದಿನದಂದು ಶಿವಲಿಂಗಕ್ಕೆ 1 ಕೆಜಿ ತೂಕದ ಚಿನ್ನದ ಮುಖವಾಡವನ್ನು ಧಾರಣೆ ಮಾಡಿದರು. ಈ ಚಿನ್ನದ ಮುಖವಾಡವನ್ನು ಜಯಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಪುತ್ರ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಅವರ ಜನನದ ಸಂದರ್ಭದಲ್ಲಿ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದರು. ಅತ್ಯಂತ ಆಕರ್ಷಕವಾಗಿ ಕಲಾವಿದರ ಕೈಚಳಕದಲ್ಲಿ ಮೂಡಿಬಂದಿರುವ ಈ ಮುಖವಾಡವನ್ನು ವರ್ಷಕ್ಕೆ ಒಮ್ಮೆ ಶಿವರಾತ್ರಿ ದಿನದಂದು ಮಾತ್ರ ಧರಿಸಲಾಗುತ್ತಿದ್ದರೆ, ಭಕ್ತರಿಗೆ ದರ್ಶನದ ಅವಕಾಶ.

ಮಂದಹಾಸದ ಮುಖ, ಗಂಗೆ ಮತ್ತು ಅರ್ಧಚಂದ್ರಾಕಾರದ ಚಿತ್ರಣವಿರುವ ಈ ಮುಖವಾಡ ಮೈಸೂರಿನ ಶಿವರಾತ್ರಿ ಆಚರಣೆಯ ಪ್ರಮುಖ ಆಕರ್ಷಣೆಯಾಗಿದೆ. ಚಾಮುಂಡೇಶ್ವರಿ ಪ್ರಾಧಿಕಾರವು ಈ ಕೊಳಗವನ್ನು ಜಿಲ್ಲಾ ಖಜಾನೆಯಿಂದ ದೇಗುಲಕ್ಕೆ ಹಸ್ತಾಂತರಿಸಿದ್ದು, ಶಿವರಾತ್ರಿ ಪೂಜಾ ಕೈಂಕರ್ಯಗಳಿಗೆ ಸಿದ್ಧತೆ ನಡೆದಿದೆ. ಈ ಮುಖವಾಡದ ವಿಶೇಷ ಏನು? ತ್ರಿನೇಶ್ವರನಿಗೆ ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ, ಅಭಿಷೇಕ ಹೇಗಿರುತ್ತೆ ಅಂತ ವಿವರಣೆ ವಿಡಿಯೋದಲ್ಲಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *