ಹೊಟ್ಟೆಪಾಡಿಗಾಗಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಹೂ ಮಾರುತ್ತಿದ್ದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ

ಹೊಟ್ಟೆಪಾಡಿಗಾಗಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಹೂ ಮಾರುತ್ತಿದ್ದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ


ನವದೆಹಲಿ, (ಜನವರಿ 22): ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಹೂವು ಮಾರುತ್ತಿದ್ದ ಪುಟ್ಟ ಬಾಲಕಿಯನ್ನು (ಹುಡುಗಿ) ಕಾಮುಕನೋರ್ವ ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಜನವರಿ 11 ರಂದು ಕೇಂದ್ರ ದೆಹಲಿ(ನವದೆಹಲಿ) ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಗುಲಾಬಿ ಹೂ ಮಾರುತ್ತಿದ್ದ 11 ವರ್ಷದ ಬಾಲಕಿಯನ್ನು ಆಟೋ ಚಾಲಕನೋರ್ವ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿಗೆ ತಪ್ಪಿಸಿಕೊಂಡ ಆಕೆಯನ್ನು ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾಗಿದ್ದ. ಬಳಿಕ ಪೊಲೀಸರು 300 ಸಿಸಿಟಿವಿ ಪರಿಶೀಲಿಸಿ ಕಾಮುಕನ ಹೆಡೆಮುರಿ ಕಟ್ಟುವಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 40 ವರ್ಷದ ದುರ್ಗೇಶ್ ಬಂಧಿತ ಕಾಮುಕ.

ಹೂ ಮಾರುವ ಬಾಲಕಿ ಮೇಲೆ ಬಿದ್ದಿತ್ತು ಕಾಮುಕನ ಕಣ್ಣು

ಜನವರಿ 11 ರಂದು ದೆಹಲಿ ಪ್ರಸಾದ್ ನಗರದಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಹುಡುಗಿ ಗುಲಾಬಿ ಹೂ ಮಾರುತ್ತಾ ಸಿಗ್ನಲ್ ಬಳಿ ನಿಂತಿದ್ದ ಆರೋಪಿ ದುರ್ಗೇಶ್ ನೋಡಿದ್ದಾನೆ. ಬಳಿಕ ತನ್ನ ಆಟೋದಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಬಾಲಕಿ ಬಳಿ ಹೋಗಿದ್ದು, ಎಲ್ಲಾ ಹೂವುಗಳನ್ನು ಮಾರಲು ಸಹಾಯ ಮಾಡುವುದಾಗಿ ನಂಬಿಸಿ ಬಾಲಕಿಯನ್ನು ಆಟೋದಲ್ಲಿ ನಿರ್ಜನಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮುಸ್ಲಿಂ ಯುವಕನ ಪ್ರೀತಿಸಿದಕ್ಕೆ ತಂಗಿಯೆಂದೂ ನೋಡಿದ್ದ ಇಬ್ಬರನ್ನೂ ಬರ್ಬರವಾಗಿ ಹತ್ಯೆಗೈದ ಸಹೋದರರು

ವೇಳೆ ಆರೋಪಿ ದುರ್ಗೇಶ್ , ಈ ಹಿಂದೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಡುಗಿಯನ್ನು ಗಮನಿಸಿ ಅಪಹರಣಕ್ಕೆ ಪ್ಲ್ಯಾನ್ ರೂಪಿಸಿದ್ದಾಗಿ ವಿಚಾರಣೆ ಬಾಯ್ಬಿಟ್ಟಿದ್ದಾನೆ. ಕಾಮುಕ ತಪ್ಪೊಪ್ಪಿಗೆಯ ಬಳಿಕ ವೈದ್ಯರ ರಕ್ತದ ಕಲೆಗಳಿರುವ ಬಟ್ಟೆಗಳು ಮತ್ತು ಇತರ ಸಾಕ್ಷಿಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯಿಂದ ಮಗುವಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ.

300 ಸಿಸಿಟಿವಿ ಕ್ಯಾಮೆರಾ ಜಾಲಾಡಿದ ಖಾಕಿ

ಆರೋಪಿಯ ಪತ್ತೆಗಾಗಿ ಸುಮಾರು 15 ಮಾರ್ಗಗಳಲ್ಲಿ ಅಳವಡಿಸಲಾದ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಒಂದು ದೃಶ್ಯದಲ್ಲಿ ಹುಡುಗಿ ಆಟೋ ಹತ್ತುತ್ತಿರುವುದು ಕಂಡುಬಂದಿದೆ. ನಂತರ ಆ ವಾಹನದ ಸಂಖ್ಯೆಯನ್ನು ಪತ್ತೆಹಚ್ಚಲಾಯಿತು. ಅದೇ ದಿನ ಆರೋಪಿಯನ್ನು ಗುರುತಿಸಿ ಬಂಧಿಸಲು ಸಹಾಯವಾಗುತ್ತಿತ್ತು ಎಂದು ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಈ ಪ್ರಕರಣದ ಬಗ್ಗೆ ಅಪರಾಧ ಅಪಹರಣ ಮತ್ತು ಪೋಕ್ಸೊ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *