
ಬಳ್ಳಾರಿ, ನವೆಂಬರ್ 25: ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಲ್ಕುಂದಿ ಗ್ರಾಮದಲ್ಲಿ 11 ನೇ ಶತಮಾನದ ಅಪರೂಪದ ಸೂರ್ಯ ಶಿಲ್ಪ ಸೇರಿ ಕೆಲ ಮೂರ್ತಿಗಳು ಇವೆ. ವಿಜಯನಗರ ತಿರುಗಾಟ ಸಂಶೋಧನ ತಂಡ, ಮೌನೇಶ ಎಂಬುವವರ ಹೊಲದಲ್ಲಿ ಈ ಮೂರ್ತಿಗಳನ್ನು ಪತ್ತೆ ಮಾಡಿದೆ. ಸೂರ್ಯ ಶಿಲ್ಪವು 52 ಸೆಂ.ಮೀ. ಅಗಲ, 83 ಸೆಂ.ಮೀ. ಎತ್ತರವಿದೆ. ಶಿಲ್ಪದ ಪಾದಗಳ ಅಳತೆ 12 ಸೆಂ.ಮೀ .ಇದೆ. ಸೂರ್ಯದೇವನು ತನ್ನ ಎರಡು ಕೈಗಳಲ್ಲಿ ಕಮಲ ಹಿಡಿದಿದ್ದು, ಶಿಲ್ಪದ ಹಿಂದೆ ವೃತ್ತಾಕಾರದ ಪ್ರಭಾವಳಿ ಇದೆ. ಕಾಲುಗಳು ತುಂಡಾಗಿರುವ ಸ್ಥಿತಿಯಲ್ಲಿ ಮೂರ್ತಿ ಸಿಕ್ಕಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.