ಮುಂಬೈ: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲೇಬೇಕು ಅಂತ ಪಣ ತೊಟ್ಟಿರುವ ವೈಭವ್ ಸೂರ್ಯವಂಶಿ ತಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ. ಸದ್ಯ ಐಪಿಎಲ್‌ಗೆ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಜೊತೆ ಟ್ರೈನಿಂಗ್‌ನಲ್ಲಿರುವ ವೈಭವ್, ಸಂಪೂರ್ಣವಾಗಿ ಮಾಂಸಾಹಾರ ತ್ಯಜಿಸಿದ್ದಾರೆ.

ಕಳೆದ ತಿಂಗಳು ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ 14 ವರ್ಷದ ವೈಭವ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವೈಭವ್ ಗುರಿ ಅಷ್ಟಕ್ಕೆ ನಿಂತಿಲ್ಲ.

ಭಾರತದ ಸೀನಿಯರ್ ತಂಡದಲ್ಲಿ ಸ್ಥಾನ ಗಿಟ್ಟಿಸಿ, 2028ರ ಟಿ20 ವಿಶ್ವಕಪ್ ಆಡಬೇಕು ಅನ್ನೋದು ಅವರ ಗುರಿ. ಇದಕ್ಕಾಗಿ ಫಿಟ್ನೆಸ್ ಹೆಚ್ಚಿಸಿಕೊಳ್ಳಲು ಹಾಗೂ ತೂಕ ಇಳಿಸಿಕೊಳ್ಳಲು ಅವರು ಈಗ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.

ವೈಭವ್ ತಮ್ಮ ಹೊಸ ಡಯಟ್ ಪ್ಲಾನ್‌ನಲ್ಲಿ ಚಿಕನ್ ಮತ್ತು ಮಟನ್ ಅನ್ನು ಪೂರ್ತಿಯಾಗಿ ಕೈಬಿಟ್ಟಿದ್ದಾರೆ. ಪ್ರೊಟೀನ್‌ಗಾಗಿ ಈಗ ಬೇಳೆಕಾಳುಗಳು, ಪನೀರ್ ಮತ್ತು ತರಕಾರಿಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಈ ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಬೇಕಿತ್ತು. ಆದರೆ ರಾಜಸ್ಥಾನ ರಾಯಲ್ಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಬೇಕಿದ್ದ ಕಾರಣ, ಪರೀಕ್ಷೆ ಬರೆಯದಿರಲು ನಿರ್ಧರಿಸಿದ್ದಾರೆ.

ಕ್ರಿಕೆಟ್ ಮೇಲೆ ಸಂಪೂರ್ಣ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವೈಭವ್ ತಂದೆ ಸಂಜೀವ್ ಸೂರ್ಯವಂಶಿ ‘ಮಿಡ್-ಡೇ’ ಪತ್ರಿಕೆಗೆ ತಿಳಿಸಿದ್ದಾರೆ. ಮುಂದಿನ ವರ್ಷ ಪರೀಕ್ಷೆ ಬರೆಯಲು ನಿರ್ಧರಿಸಲಾಗಿದೆ.

ಐಪಿಎಲ್ ಮುಗಿಯುವಷ್ಟರಲ್ಲಿ ವೈಭವ್‌ಗೆ 15 ವರ್ಷ ತುಂಬಲಿದೆ. ಇದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಐಸಿಸಿ ನಿಗದಿಪಡಿಸಿರುವ ಕನಿಷ್ಠ ವಯಸ್ಸು. ಇದರ ನಂತರ ವೈಭವ್ ಭಾರತದ ಸೀನಿಯರ್ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂದು ಕೋಚ್ ಮನೀಶ್ ಓಜಾ ಭರವಸೆ ವ್ಯಕ್ತಪಡಿಸಿದ್ದಾರೆ.

Source link
ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!