
ಬೆಳಗಾವಿ, (ಮಾರ್ಚ್ 17): 15 ದಿನಗಳ ಹಿಂದೆಯೇ ಜನಿಸಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು, ತಂದೆ ಮೇಲೆ ಅನುಮಾನವಿದೆ. ಹೌದು…ಳಗಾವಿ (ಬೆಳಗಾವಿ) ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಪ್ರಿಯಾಂಕಾ ಇಂದು (ಮಾರ್ಚ್ 17) ಏಕಾಏಕಿ ಸಾವನ್ನಪ್ಪಿದ್ದು, ತಂದೆ ಮಗುವಿಗೆ ವಿಷ ಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಬಿಮ್ಸ್ ಆಸ್ಪತ್ರೆಯ ಮುಂದೆ ಮಗುವಿನ ಶವವಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಮಗುವಿನ ತಂದೆ ಭೀಮರಾಯ ತಲೆಮರೆಸಿಕೊಂಡಿದ್ದಾರೆ. ಬಿಮ್ಸ್ ಆಸ್ಪತ್ರೆಗೆ ಡಿಸಿಪಿ ನಾರಾಯಣ್ ಬರಮನಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮದ ಭರವಸೆಯನ್ನು ನೀಡಿದೆ.
ಹೆರಿಗೆ ಹಿನ್ನೆಲೆ ಶೀಲಾ ತವರುಮನೆ ಉಕ್ಕಡ ಗ್ರಾಮದಲ್ಲಿ ಇದ್ದಳು. ಹೀಗಾಗಿ ಭೀಮರಾಯ ಇಂದು (ಮಾರ್ಚ್ 17) ಮಧ್ಯಾಹ್ನ ಉಕ್ಕಡ ಗ್ರಾಮಕ್ಕೆ ಆಗಮಿಸಿ ಪತ್ನಿ ಹಾಗೂ ಮಗು ಪ್ರಿಯಾಂಕಾಳನ್ನ ನೋಡಿಕೊಂಡು ವಾಪಸ್ ತಮ್ಮೂರು ಕಡೆ ಹೋಗಿದ್ದಾನೆ. ಆದರೆ, ಏಕಾಏಕಿ ಮಗು ಸಾವನ್ನಪ್ಪಿದೆ. ಇದರಿಂದ ಕಂಗಾಲಾಗಿ ಮಗು ಚೆನ್ನಾಗಿತ್ತು ದಿಢೀರ್ ಏನಾಯ್ತು ಎಂದು ಯೋಚಿಸುವಾಗ ಮೃತ ಮಗುವಿನ ತಂದೆ ಭೀಮರಾಯನ ಮೇಲೆ ಅನುಮಾನ ಬಂದಿದೆ.
ಇದನ್ನೂ ಓದಿ: ಒಂದೇ ರೂಮ್ ನಲ್ಲಿದ್ದ ಸ್ನೇಹಿತರ ನಡುವೆ ಗಲಾಟೆ: ಸುತ್ತಿಗೆಯಿಂದ ಹೊಡೆದು ಗೆಳೆಯನ ಬರ್ಬರ ಹತ್ಯೆ
ಸಣ್ಣದೊಂದು ಟ್ಯೂಬ್ ಹಿಡಿದುಕೊಂಡು ಬಂದಿದ್ದ. ಅದೇ ಟ್ಯೂಬ್ ನಿಂದ ಮಗುವಿಗೆ ಕುಡಿಸಿದ್ದಾಳೆ ಎಂದು ಪತ್ನಿ ಶೀಲಾ ಮತ್ತು ಆಕೆಯ ಪೋಷಕರಿಂದ ಗಂಭೀರ ಆರೋಪವಿದೆ. ಇನ್ನೊಂದೆಡೆ ಭೀಮರಾಯ ಸಹ ನಾಪತ್ತೆ, ಮತ್ತಷ್ಟು ಅನುಮಾನಕ್ಕೆ ಒಳ್ಳೆಯದು. ಸದ್ಯ ಬಿಮ್ಸ್ ಆಸ್ಪತ್ರೆಯ ಮುಂದೆ ಮಗುವಿನ ಶವವಿಟ್ಟುಕೊಂಡು ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿಯದಂತೆ ಸ್ಥಳಕ್ಕೆ ಡಿಸಿಪಿ ನಾರಾಯಣ್ ಬರಮನಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಆಚೆ ಬರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ