ಪ್ರೇಯಸಿ ಜೊತೆ ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ

ಪ್ರೇಯಸಿ ಜೊತೆ ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ


ಪ್ರತಾಪಗಢ, ಫೆಬ್ರವರಿ 6: ಪ್ರತಾಪಗಢದಲ್ಲಿ 15 ವರ್ಷದ ಬಾಲಕನೊಬ್ಬ ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆ (ಮದುವೆ) ಮಾಡಿಸುವುದಾದರೆ ಮಾತ್ರ ಕೆಳಗೆ ಇಳಿಯುತ್ತೇನೆ ಎಂದು ಹೈ-ವೋಲ್ಟೇಜ್ ವಿದ್ಯುತ್ ತಂತಿಯನ್ನು ಹಿಡಿದು ನೇತಾಡುತ್ತಿದ್ದ. ಒಲೀಸರು ಆತ ಇಷ್ಟಪಟ್ಟ ಹುಡುಗಿಯ ಜೊತೆ ಮದುವೆ ಮಾಡಿಸುವುದಾಗಿ ಮನವೊಲಿಸಿದ ನಂತರ ಕೆಳಗೆ ಇಳಿಯಲು ಒಪ್ಪಿಕೊಂಡಳು.

ಕೊನೆಗೆ ಏಣಿಯನ್ನು ಹಾಕಿ ಅವನನ್ನು ಸುರಕ್ಷಿತವಾಗಿ ಕೆಳಗೆ ತರಲಾಯಿತು. 40 ನಿಮಿಷಗಳ ಕಾಲ ವಿದ್ಯುತ್ ತಂತಿ ಹಿಡಿದು ನೇತಾಡುತ್ತಿದ್ದ. ಕೆಳಗೆ ಬಂದ ತಕ್ಷಣ ಆತ ಅಳಲು ಪ್ರಾರಂಭಿಸಿದನು. ಆತ 13 ವರ್ಷದ ಹುಡುಗಿಯನ್ನು ಪ್ರೀತಿಸುತ್ತಿದ್ದ. 1 ವರ್ಷದಿಂದ ಅವರಿಬ್ಬರೂ ಪ್ರೀತಿಸುತ್ತಿದ್ದರು. ಆಕೆಯ ಜೊತೆ ಮದುವೆ ಮಾಡಲು ಮನೆಯವರು ಒಪ್ಪಿರಲಿಲ್ಲ. ಹೀಗಾಗಿ, ಆತ ಈ ನಾಟಕವಾಡಿದ್ದ. ನಂತರ ಹುಡುಗನನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಅವನಿಗೆ ಸಲಹೆ ನೀಡಿ ಅವನ ಕುಟುಂಬಕ್ಕೆ ಒಪ್ಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *