Video: 12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ

Video: 12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ


ಸಾಲ ಮಾಡಿಯಾದ್ರು ಮಕ್ಕಳಿಗೆ ಒಂದೊಳ್ಳೆ ಬದುಕು ಕಟ್ಟಿಕೊಡಲು ಹೆತ್ತವರು ಶ್ರಮಿಸುತ್ತಾರೆ. ಕಷ್ಟ ಪಟ್ಟು ಓದಿ ಒಂದೊಳ್ಳೆ ಉದ್ಯೋಗ ಪಡೆದು ಕೊಂಡು ಹೆತ್ತವರಿಗೆ (ಪಾಲಕರು) ಹೆಗಲಾದರೆ ಅದಕ್ಕಿಂತ ಖುಷಿ ಬೇರೇನಿದೆ. ಆದರೆ ಇಲ್ಲೊಬ್ಬ 17 ವರ್ಷದ ಬಾಲಕನು (ಯುವಕ) ತನ್ನ ತಾಯಿಗೆ ಸರ್ಪ್ರೈಸ್ ನೀಡಿದ್ದಾನೆ. ಹೌದು, ತನ್ನ ತಾಯಿಯ 10,000 ಪೌಂಡ್ (ಸುಮಾರು 12 ಲಕ್ಷ ರೂ) ಸಾಲವನ್ನು ತೀರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಒಂದಿಷ್ಟು ಹಣವನ್ನು ತಾಯಿಯ ಕೈಯಲ್ಲಿ ಸಾಲ ತೀರಿಸಲು ಹೇಳಿದ್ದಾನೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮನ್ ದುಗ್ಗಲ್ (@aman.jkd) ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ ಈ ಕ್ಲಿಪ್ ಇದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ನನ್ನ ಅಮ್ಮ ನನಗಾಗಿ ತನ್ನಿಂದ ಸಾಧ್ಯವಾದ ಎಲ್ಲವನ್ನೂ ಸಿದ್ಧಪಡಿಸಿದ್ದಾರೆ. ನಾನು ಅಂತಿಮವಾಗಿ ನೋಡಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ಈ ಭಾವನೆಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ, ಈ ರೀತಿ ಕ್ಷಣವನ್ನು ಸೃಷ್ಟಿಸಲು ತುಂಬಾ ಪ್ರಯತ್ನ ಪಟ್ಟೆ. ಒಂದು ವರ್ಷದ ಬಳಿಕ ಅದು ಸಂಭವಿಸಿತು. ನಾನು ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ. ದೇವರಿಗೆ, ನನ್ನ ಅಮ್ಮನಿಗೆ ಮತ್ತು ನನಗೂ ಸಹ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

17ರ ಹರೆಯದ ಬಾಲಕ ತನ್ನ ತಾಯಿಗೆ ತಾನು ಮಾಡಿದ ಕೆಲಸವನ್ನು ರಿವೀಲ್ ಮಾಡುವ ಮೊದಲು ತಾಯಿಯ ಮೇಲೆ ತನ್ನ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು. ತನ್ನ ಜೀವನದ ಅತ್ಯಂತ ವಿಶೇಷ ಮಹಿಳೆ ಎನ್ನುತ್ತಾ ನಾನು ಏನನ್ನೋ ಹೇಳಲು ಬಯಸುತ್ತೇನೆ ಎಂದು ಮಗನು ಹೇಳುತ್ತಾನೆ. ತಾಯಿಯೂ ನಾನೂ ನಿನ್ನನ್ನು ಪ್ರೀತಿಸುತ್ತೇನೆ ಆದರೆ ನಾನು ಯಾಕೆ ಅಳುತ್ತಿದ್ದೇನೆಂದು ನನಗೂ ತಿಳಿದಿಲ್ಲ” ಎಂದು ಹೇಳುವುದನ್ನು ನೋಡಬಹುದು ಅಮನ್ ಅಮ್ಮನ ಬಳಿ ಕಣ್ಣು ತೆರೆಯಲು ಹೇಳಿ ತನ್ನ ಕೈಯಲ್ಲಿದ್ದ ಹಣವನ್ನು ಅವಳಿಗೆ ನೀಡುತ್ತಾಳೆ.

ಇದನ್ನೂ ಓದಿ:ಮಗಳ ಕಾಳಜಿಯುತ ಮಾತು ಕೇಳಿ ಭಾವುಕನಾದ ತಂದೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಒಬ್ಬ ಬಳಕೆದಾರ ಈ ವಿಡಿಯೋ ಅದ್ಭುತವಾಗಿದೆ. ಈ ಕ್ಷಣವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾನು ಕೇವಲ 7 ವರ್ಷದವನಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ. ಇಂತಹದ್ದನ್ನು ಮಾಡಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದರು. ಮತ್ತೊಬ್ಬರು, ನೀವು ತಾಯಿಯ ಸಾಲಕ್ಕೆ ಹೆಗಲಾಗಿರುವುದು ಖುಷಿ ತಂದಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:58 pm, ಸೋಮ, 5 ಜನವರಿ 26





Source link

Leave a Reply

Your email address will not be published. Required fields are marked *