Headlines

ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್‌ ಫೇವರಿಟ್

ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್‌ ಫೇವರಿಟ್

ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್‌ ಫೇವರಿಟ್

ಫೆಬ್ರವರಿ 14ರ ಪ್ರೇಮಿಗಳ ದಿನದ ಆಚರಣೆ ಇದೀಗ ಹೊಸ ರೂಪ ಪಡೆದುಕೊಂಡಿದೆ. ಉಡುಗೊರೆಗಳ ಬದಲಾಗಿ ಜೋಡಿಗಳು ಪ್ರವಾಸಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೋಟೆಲ್ ಮತ್ತು ರೆಸಾರ್ಟ್‌ಗಳ ಬುಕ್ಕಿಂಗ್ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ.

ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಪ್ರೇಮಿಗಳ ದಿನದ ಆಚರಣೆಯಾಗಿ ಜೋಡಿಗಳು ಮಾತ್ರವಲ್ಲದೇ ದಂಪತಿಗಳು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹಾಗಾಗಿ ಪ್ರವಾಸಿ ಸ್ಥಳಗಳಲ್ಲಿನ ಹೋಟೆಲ್, ಓಯೋ ರೂಮ್‌ ಬುಕ್ಕಿಂಗ್‌ನಲ್ಲಿ ಏರಿಕೆಯಾಗಿದೆ. ಫೆ.14ಕ್ಕೆ ರಜೆಗಳನ್ನು ಹೊಂದಾಣಿಕೆ ಮಾಡಿಕೊಂಡು ಜನರು ಪ್ರವಾಸಕ್ಕೆ ಮುಂದಾಗುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್ ಏರಿಕೆಯಾಗಿದೆ. ಟ್ರಾವೆಲ್ ಆಪ್‌ಗಳ ಪ್ರಕಾರ, ಬುಕ್ಕಿಂಗ್ ಪ್ರಮಾಣ ಎರಡುಪಟ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. ಈ ಮೊದಲು ಪ್ರೇಮಿಗಳ ದಿನ ಉಡುಗೊರೆ ವಿನಿಮಯ, ಊಟ ಮತ್ತು ಒಂದು ಸಿನಿಮಾ ನೋಡೋದಕ್ಕೆ ಮಾತ್ರ ಸೀಮಿತವಾಗಿತ್ತು. ಆದ್ರೆ ಈಗ ಪ್ರೇಮಿಗಳ ದಿನವನ್ನು ಜನರು ವಿಶೇಷವಾಗಿ ಆಚರಿಸಲು ಮುಂದಾಗುತ್ತಿದ್ದಾರೆ.

ಗುವಾಹಟಿ ಮತ್ತು ಕೊಲಂಬೊದಂತಹ ಪ್ರದೇಶಗಳಲ್ಲಿನ ಹೋಟೆಲ್ ರೂಮ್‌ ಬುಕ್ಕಿಂಗ್ ಪ್ರಮಾಣ ಏರಿಕೆಯಾಗಿದೆ ಎಂದು ವರದಿಯಾಗಿದೆ. ಭಾರತೀಯರು ಸಮೀಪದ ಮತ್ತು ಕಡಿಮೆ ಬೆಲೆಯ ಪ್ಯಾಕೇಜ್‌ ಹೊಂದಿರುವ ವಿದೇಶಗಳಿಗೂ ಅಧಿಕವಾಗಿ ಭೇಟಿ ನೀಡುತ್ತಿದ್ದಾರೆ. ವಿಶೇಷವಾಗಿ ದಂಪತಿಗಳಲ್ಲಿ ಪ್ರವಾಸ ಆಸಕ್ತಿ ಹೆಚ್ಚಳಗೊಂಡಿರೋದು ಟ್ರಾವೆಲಿಂಗ್ ಏಜೆನ್ಸಿಗಳು ಹೇಳುತ್ತಿವೆ.

ಓಯೋ ಹೋಟೆಲ್ ಜೊತೆಯಲ್ಲಿಯೂ ರೆಸಾರ್ಟ್‌ಗಳಿಗೂ ಬೇಡಿಕೆ ಹೆಚ್ಚಳವಾಗಿದೆ. ಹಸಿರು ವಾತಾವರಣ, ನದಿ, ಬೆಟ್ಟ ಮತ್ತು ಕಡಲತೀರದಲ್ಲಿರುವ (ಬೀಚ್) ರೆಸಾರ್ಟ್, ಹೋಂಸ್ಟೇಗಳ ಬುಕ್ಕಿಂಗ್ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೋಡಿಗಳು ಈ ಒಂದು ದಿನಕ್ಕಾಗಿ ಹೆಚ್ಚಿನ ಹಣ ವ್ಯಯಿಸಲು ಮುಂದಾಗುತ್ತಿದ್ದಾರೆ. ಇನ್ನು ಕೆಲ ಜೋಡಿಗಳು ಬುಕ್ಕಿಂಗ್ ಮೊದಲೇ ಕೆಲವೊಂದು ವಿಶೇಷ ವ್ಯವಸ್ಥೆಗಳಿಗೆ ಡಿಮ್ಯಾಂಡ್ ಮಾಡುತ್ತಿದ್ದು, ಇದಕ್ಕಾಗಿ ಹೆಚ್ಚಿನ ಹಣ ವ್ಯಯಿಸಲು ಹಿಂದೇಟು ಹಾಕುತ್ತಿಲ್ಲವಂತೆ.

ಸದ್ಯ ಶಾಂತಿಯುತ ವಾತಾವರಣದಲ್ಲಿ ವಿಶ್ರಾಂತಿ ಪಡೆಯುವ ಟ್ರೆಂಡ್ ಹೆಚ್ಚಾಗಿದ್ದು, ಜೋಡಿಗಳು ಈ ತರಹದ ಸ್ಥಳಕ್ಕಾಗಿ ಗೂಗಲ್‌ನಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಹೋಟೆಲ್ ವ್ಯವಸ್ಥಾಪಕರ ಪ್ರಕಾರ, ಜೋಡಿಗಳು ಕೊಠಡಿ ಅಲಂಕಾರ, ಖಾಸಗಿ ಭೋಜನ, ಕಾಡಿನಲ್ಲಿ ಭೋಜನ, ಗುಲಾಬಿ ದಳದ ಸ್ನಾನಗೃಹ, ಕ್ಯಾಂಡಲ್‌ಲೈಟ್ ಸೆಟಪ್‌, ಪ್ರೀಮಿಯಂ ಸೌಲಭ್ಯಗಳನ್ನು ಕೇಳುತ್ತಾರೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಜೋಡಿಗಳು ಮಾಡುವ ಖರ್ಚು ಸಹ ಹೆಚ್ಚಳವಾಗಿದೆ. ಈ ಹಿಂದೆ ಇಂತಹ ಬೇಡಿಕೆ ತುಂಬಾ ವಿರಳವಾಗಿತ್ತು. ಆದ್ರೆ ಇಂದು ಈ ತರಹದ ಬೇಡಿಕೆಗಳು ಸಾಮಾನ್ಯವಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಈ ಒಂದು ಕಾರ್ಡ್ ಇದ್ದರೆ OYO ರೂಮ್‌ಗೆ ಸಿಗಲ್ಲ ಎಂಟ್ರಿ! ಚೆಕ್ ಇನ್ ನಿಯಮಗಳು ಹೀಗಿವೆ

ಪ್ರೇಮಿಗಳ ದಿನದಿಂದಾಗಿ ಹೋಟೆಲ್ ಉದ್ಯಮದಲ್ಲಿ ವಹಿವಾಟು ಹೆಚ್ಚಳವಾಗಿದೆ. ಇದು ಹೋಟೆಲ್, ರೆಸಾರ್ಟ್ ಮಾಲೀಕರು ಸೇರಿದಂತೆ ಸ್ಥಳೀಯ ವ್ಯಾಪಾರಿಗಳ ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ. ಪ್ರಯಾಣದ ಟ್ರೆಂಡ್ ಹೆಚ್ಚಾಗಿದ್ದರಿಂದ ಭಾರತದಲ್ಲಿ ಟ್ರಾವೆಲಿಂಗ್ ಉದ್ಯಮ ಬೆಳವಣಿಗೆಯಾಗುತ್ತಿದೆ.

ಇದನ್ನೂ ಓದಿ: ಶಾಲೆಯಲ್ಲಿ ಆರಂಭವಾದ ಪ್ರೀತಿ, OYO ರೂಮ್‌ನಲ್ಲಿ ಅಂತ್ಯ; 24ರ ಶಿಕ್ಷಕ, 14ರ ಹುಡುಗಿಗೂ ಲವ್!

Source link

Leave a Reply

Your email address will not be published. Required fields are marked *