ಕೇಂದ್ರ ಬಜೆಟ್‌ಗೂ ಮುನ್ನವೇ ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಿಸಿವೆ. ಆದರೆ, ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಬೆಲೆ ಏರಿಕೆಯಿಂದಾಗಿ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರಗಳು ಪರಿಷ್ಕರಣೆಗೊಂಡಿವೆ.
ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿಕೊಂಡಿವೆ. ಬೆಲೆ ಏರಿಕೆ ಮಾಡುವ ಮೂಲಕ ಎಲ್‌ಪಿಜಿ ಗ್ರಾಹಕರಿಗೆ ಹೊಡೆತ ನೀಡಿವೆ.

19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂ.ಗಳಷ್ಟು ಏರಿಕೆಯಾಗಿದೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗೃಹಬಳಕೆ ಸಿಲಿಂಡರ್ ಏಪ್ರಿಲ್ 8, 2025 ರಂದು ಕೊನೆಯ ಬೆಲೆ ಬದಲಾವಣೆಯಾದ ದರದಲ್ಲಿಯೇ ಗ್ರಾಹಕರಿಗೆ ಸಿಗುತ್ತಿದೆ.

ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,740.50 ರೂ. ಆಗಲಿದೆ. ಮುಂಬೈನಲ್ಲಿ ಪರಿಷ್ಕೃತ ಬೆಲೆ 1,692 ರೂ. ಕೋಲ್ಕತ್ತಾದಲ್ಲಿ ಬೆಲೆ 1,844.50 ರೂ.ಗೆ ಏರಿದ್ದರೆ, ಚೆನ್ನೈನಲ್ಲಿ ಈಗ 1,899.50 ರೂ. ಇದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತವೆ. ಆದ್ದರಿಂದ ಪ್ರತಿತಿಂಗಳು ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಜನವರಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 111 ರೂ. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಏರಿಕೆಯಾಗಿದೆ.

ಇದನ್ನೂ ಓದಿ: Union Budget 2026: ಬಜೆಟ್‌ನಲ್ಲಿ ಯಾವ ರಾಜ್ಯಕ್ಕೆ ದಂಡಿಯಾಗಿ ಸಿಗಲಿದೆ ದುಡ್ಡು?

ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕ್ರಮವಾಗಿ 5 ರೂ. 10 ರೂ.ಗಳಷ್ಟು ಕಡಿಮೆಯಾಗಿತ್ತು. ಇದಕ್ಕೂ ಮೊದಲು ಅಕ್ಟೋಬರ್ 1 ರಂದು ಬೆಲೆಯಲ್ಲಿ ಕೇವಲ 15.50 ರೂ.ಗಳಷ್ಟು ಅಲ್ಪ ಏರಿಕೆ ಕಂಡುಬಂದಿತ್ತು. ಇದೀಗ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆಯತ್ತ ಮುಖ ಮಾಡಿದೆ.

ಇದನ್ನೂ ಓದಿ: ಚಿನ್ನ 2 ದಿನದಲ್ಲಿ ₹18000 ಬೆಳ್ಳಿ 60,000 ರು. ಕುಸಿತ! ದಿಢೀರ್ ಇಳಿಕೆಗೆ ಕಾರಣವೇನು?

Source link
ಬಜೆಟ್‌ಗೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ! LPG ಸಿಲಿಂಡರ್ ದರದಲ್ಲಿ ಹೆಚ್ಚಳ