ದೊಡ್ಡಬಳ್ಳಾಪುರ: ಹಿಟ್​ & ರನ್​​ಗೆ ಇಬ್ಬರು ಬೈಕ್​ ಸವಾರರು ಬಲಿ

ದೊಡ್ಡಬಳ್ಳಾಪುರ: ಹಿಟ್​ & ರನ್​​ಗೆ ಇಬ್ಬರು ಬೈಕ್​ ಸವಾರರು ಬಲಿ


ಬೆಂಗಳೂರು, ಅಕ್ಟೋಬರ್ 28: ಹಿಟ್ & ರನ್ ಗೆ ಎರಡು ಬೈಕ್ ಸವಾರರು ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ (ದೊಡ್ಡಬಳ್ಳಾಪುರ) ತಾಲೂಕಿನ ರಾಮಯ್ಯನಪಾಳ್ಯ ಬಳಿ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ತೂಬಗೆರೆ ನಿವಾಸಿ ನಂದನ್ ಕುಮಾರ್(22) ಮತ್ತು ದೊಡ್ಡತಿಮ್ಮನಹಳ್ಳಿಯ ರವಿಕುಮಾರ್(24) ಮೃತ ಯುವಕ, ಮೃತರು ದೊಡ್ಡಬಳ್ಳಾಪುರ ನಗರದ ಎಲ್ ಆ್ಯಂಡ್ ಟಿ ಕಂಪನಿ ಸಿಬ್ಬಂದಿ ಎಂಬುದು ಗೊತ್ತಾಗಿದೆ. ಬೈಕ್‌ಗೆ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ವಾಹನ ಸಮೇತ ಚಾಲಕ ಎಸ್ಕೇಪ್ ಆಗಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *