
ಮೊನ್ನೆಯಷ್ಟೇ ಅರ್ಥಾತ್ ಇದೇ ಜನವರಿ 25ರಂದು ಅನುಶ್ರೀ ಅವರು 38ನೇ ವರ್ಷಕ್ಕೆ ಕಾಲಿಟ್ಟರು. ಆದರೆ, 18ನೇ ವಯಸ್ಸಿನಲ್ಲಿಯೇ ಆ್ಯಂಕರಿಂಗ್ ಕ್ಷೇತ್ರಕ್ಕೆ ಬಂದಿರೋ ಅನುಶ್ರೀ ಅವರ ಈ ಪಯಣಕ್ಕೆ ಇದೀಗ 20 ವರ್ಷಗಳ ಸಂಭ್ರಮ. ಇದನ್ನು ಜೀ ಕನ್ನಡ ವೇದಿಕೆ ಸೆಲಬ್ರೇಟ್ ಮಾಡಿದೆ. ಈ ಸಂದರ್ಭದಲ್ಲಿ, ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನೆದು ಅನುಶ್ರೀ ಭಾವುಕರಾದರು. ವೇದಿಕೆಯ ಮೇಲೆಯೇ ಕಣ್ಣೀರಾದರು. ಯಾವುದೇ ಕ್ಷೇತ್ರದ ಸೆಲೆಬ್ರಿಟಿಯ ಹಿನ್ನೆಲೆ, ಬಾಲ್ಯ ತೆಗೆದುಕೊಂಡಾಗ, ಅದರಲ್ಲಿ ನೋವಿನ ಹಾದಿಗಳೇ ತುಂಬಿರುತ್ತದೆ. ಅದೇ ರೀತಿ ಅನುಶ್ರೀ ಅವರೂ ಇಂದು ಈ ಮಟ್ಟಕ್ಕೆ ಬೆಳೆಯಬೇಕು ಎಂದರೆ, ಅದರ ಹಿಂದೆ ನೋವಿನ ಹಾದಿಗಳಿವೆ, ಮುಳ್ಳಿನ ಮೇಲೆ ನಡೆದ ದಿನಗಳಿವೆ. ಅದನ್ನೇ ನೆನೆದು ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತರು.