Headlines

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ? ವಿಶ್ವಾಸದಲ್ಲಿ ಡಿಕೆಶಿ ಆಪ್ತ ಶಾಸಕರು

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ? ವಿಶ್ವಾಸದಲ್ಲಿ ಡಿಕೆಶಿ ಆಪ್ತ ಶಾಸಕರು


ರಾಮನಗರ, (ಡಿಸೆಂಬರ್ 29): ಕಾಂಗ್ರೆಸ್ ಮನೆಯಲ್ಲಿ ಸಿಎಂ ಕುರ್ಚಿ ಕಾಳಗಕ್ಕೆ ಸದ್ಯ ಜನವರಿ 15ರವರೆಗೆ ಅಲ್ಪವಿರಾಮ ಬಿದ್ದಿದೆ. ಆದರೆ ಪಟ್ಟದ ಪಗಡೆಯಾಟೆ ಮಾತ್ರ ಕಂಡು ಕಾಣದಂತೆ ಒಳಗೊಳಗೆ ನಡೀತಾನೆ ಇದೆ. ಈ ಮೇಲೆ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಬಾಣ ಉರುಳಿಸಿರುವ ಅಹಿಂದ ಶಕ್ತಿ ಪ್ರದರ್ಶನವೂ ಒಂದು. ಸಿದ್ದು ತವರು ಮೈಸೂರು ಅಹಿಂದ ಸಮಾವೇಶಕ್ಕೆ ಸಜ್ಜಾಗ್ತಿದೆ. ಇದರ ನಡುವೆ ಜನವರಿ 6 ಅಥವಾ 9ಕ್ಕೆ ಡಿಕೆಶಿ ಸಿಎಂ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಡಿಕೆಶಿ ಆಪ್ ಶಾಸಕ ಇಕ್ಬಾಲ್ ಹುಸೇನ್ ಶರಣರನ್ನು ಮುಂದಿಟ್ಟು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಮಾತನಾಡಿರುವ ಕೈ ಶಾಸಕ ಇಕ್ಬಾಲ್ ಹುಸೇನ್, ಜನವರಿ 6 ಅಥವಾ 9ಕ್ಕೆ ಡಿಕೆ ಅಧಿಕಾರ ಹಿಡಿಯುತ್ತಾರೆ. 200 ಪರ್ಸೆಂಟ್ ಈ ಎರಡು ಡೇಟ್ ನಲ್ಲಿ ಅಧಿಕಾರ ಸಿಗಲಿದೆ. ಈಗಲು ಸಹ ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ನನಗೆ ವಿಶ್ವಾಸವಿದೆ ಡಿ.ಕೆ.ಶಿವಕುಮಾರ್ ಸಿಎಂ ಶಿವಕುಮಾರ್ ಆಗಿದ್ದಾರೆ. ಶರಣರು ಹೇಳುವ ಮಾತು ಸತ್ಯವಾಗುತ್ತದೆ. ಅಧಿಕಾರ ಹಂಚಿಕೆ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ ಅಲ್ವಾ. ನನಗೆ ಈ ಬಗ್ಗೆ ನಂಬಿಕೆ ಇದೆ. ಭಗವಂತ ನಮ್ಮ ಬೇಡಿಕೆಯನ್ನು ನೀಡುತ್ತಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *